ತಿರುವನಂತಪುರ: ಕೇರಳದ ಭತ್ತದ ಕಣಜ ಎಂದು ಖ್ಯಾತಿ ಗಳಿಸಿರುವ ಕುಟ್ಟನಾಡು ಪ್ರದೇಶದಲ್ಲಿ ಮಂಗಳವಾರ ಏಕಕಾಲಕ್ಕೆ 70 ಸಾವಿರ ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್, ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಕುಟ್ಟನಾಡು, ಕೈನಾಕಾರಿ, ನೆಡುಮುಡಿ ಪ್ರದೇಶಗಳ 1 ಲಕ್ಷ ಕಟ್ಟಡ ಹಾಗೂ ಕೃಷಿ ಭೂಮಿಯಲ್ಲಿ ಬಿದ್ದಿದ್ದ ಕಸ ಮತ್ತಿತರ ವಶಗಳನ್ನು ತೆರವುಗೊಳಿಸಿದರು.
1 ಸಾವಿರ ಎಂಜಿನಿಯರ್‌ಗಳು, ಐಟಿ ಉದ್ಯೋಗಿಗಳು, ಹಾವು ಹಿಡಿಯುವವರು ಕೂಡ ಈ ಕಾರ್ಯದಲ್ಲಿ ಜೊತೆಗೂಡಿದ್ದರು.
ಕುಟ್ಟನಾಡು ಪ್ರದೇಶದಲ್ಲಿ ನಡೆದ ಶುಚಿತ್ವ ಕಾರ್ಯಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 30ರ ಒಳಗೆ ರಾಜ್ಯದ ಎಲ್ಲ ಜಿಲ್ಲೆಗಳನ್ನು ಶುಚಿಗೊಳಿಸಲು ಇಂತಹ ಕಾರ್ಯಗಳನ್ನು ಮತ್ತಷ್ಟು ನಡೆಸಲು ಸರ್ಕಾರ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.