ADVERTISEMENT

ಪುಣೆಯಲ್ಲಿ ಗೋಡೆ ಕುಸಿದು ಐವರ ಸಾವು

ಪಿಟಿಐ
Published 24 ಅಕ್ಟೋಬರ್ 2024, 11:07 IST
Last Updated 24 ಅಕ್ಟೋಬರ್ 2024, 11:07 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಪುಣೆ: ಇಲ್ಲಿನ ಕಾರ್ಮಿಕರ ಶೆಡ್‌ನಲ್ಲಿ ತಾತ್ಕಾಲಿಕ ನೀರಿನ ಟ್ಯಾಂಕ್‌ ಇದ್ದ ಗೋಡೆ ಕುಸಿದು ಬಿದ್ದು ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಿಂಚವಾಡ್ ಪಟ್ಟಣದಲ್ಲಿ ಗುರುವಾರ ಈ ಘಟನೆ ಸಂಭವಿಸಿದೆ.

ಇಲ್ಲಿ ಕಟ್ಟಡದ ಕಾಮಗಾರಿಯೊಂದು ನಡೆಯುತ್ತಿದ್ದು, ಕಾರ್ಮಿಕರಿಗಾಗಿ ಶೆಡ್‌ ನಿರ್ಮಾಣ ಮಾಡಲಾಗಿತ್ತು. ನೀರಿನ ಟ್ಯಾಂಕ್‌ ಇಟ್ಟಿದ್ದ ಗೋಡೆ ಕುಸಿದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೂವರು ಸ್ಥಳದಲ್ಲೇ ಮೃತಪಟ್ಟರೇ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಟ್ಟಡದ ಮಾಲೀಕ ನಾಪತ್ತೆಯಾಗಿದ್ದು ಘಟನೆ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.