ಬೆಂಗಳೂರು: ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅವರ ಹೊಸ ರೂಪ ಶೀಘ್ರದಲ್ಲೇ ಬರುತ್ತದೆ ಎಂಬ ನೆಟ್ಟಿಗರೊಬ್ಬರ ಪೂರ್ವ ಗ್ರಹಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ವಿಮಾನದಲ್ಲಿ ಕಡತಗಳನ್ನು ಪರಿಶೀಲಿಸುತ್ತಿರುವ ಫೋಟೋ ಹೊಸ ರೂಪದಲ್ಲಿ ಶೀಘ್ರದಲ್ಲೇ ಬರುತ್ತದೆ ಎಂದಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಡತಗಳ ಪರಿಶೀಲನೆಯ ಫೋಟೋ ಪ್ರತ್ಯಕ್ಷವಾಗಿದೆ.
ಇಂಡಿಯಾ ಹಿಸ್ಟರಿ ಪಿಕ್ಸ್ ಎಂಬ ಟ್ವಿಟರ್ ಖಾತೆಯಲ್ಲಿ,ವಿಮಾನದಲ್ಲಿ ಲಾಲ್ ಬಹದೂರ್ ಶಾಸ್ತ್ರಿ ಅವರು ಕಡತಗಳನ್ನು ಪರಿಶೀಲಿಸುತ್ತ ತಮ್ಮ ಪತ್ನಿ ಜೊತೆ ಪ್ರಯಾಣಿಸುತ್ತಿರುವ ಫೋಟೋವನ್ನುಸೆಪ್ಟೆಂಬರ್ 16ರಂದು ಹಂಚಿಕೊಳ್ಳಲಾಗಿದೆ.
ಇದಕ್ಕೆ ಸಂಜೀವ್ ಪಿ ಸಾಯಿಕಿಯಾ ಎಂಬ ಟ್ವಿಟರ್ ಬಳಕೆದಾರರೊಬ್ಬರು, 'ಶೀಘ್ರದಲ್ಲೇ ಈ ತರದ ಫೋಟೋ ಹೊಸ ರೂಪದಲ್ಲಿ ಬರಲಿದೆ ಮಿತ್ರರೇ. ಐಡಿಯಾ ಕೊಟ್ಟಿದ್ದಕ್ಕೆ ಧನ್ಯವಾದ' ಎಂದು ರೀಟ್ವೀಟ್ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಲಾಲ್ ಬಹದೂರ್ ಶಾಸ್ತ್ರಿ ಅವರ ಫೋಟೋ ಜೊತೆಗೆ ಹೋಲಿಸಿ ಸಾಕಷ್ಟು ಟ್ವೀಟ್‌ಗಳು ಹರಿದಾಡುತ್ತಿವೆ.
ಮೂರು ದಿನಗಳ ಹಿಂದೆ ಲಾಲ್ ಬಹದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಅವರು ಶಾಸ್ತ್ರಿಯವರು ವಿಮಾನದಲ್ಲಿ ಕಡತಗಳನ್ನು ಓದುತ್ತಿರುವ ಫೋಟೋ ಹಂಚಿಕೊಂಡಿದ್ದರು. 'ವಿಮಾನದಲ್ಲಿ ನನ್ನ ಅಜ್ಜ ಮತ್ತು ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಕಡತಗಳನ್ನು ಓದುತ್ತಿರುವುದು' ಎಂದು ಸೆಪ್ಟೆಂಬರ್ 19ರಂದು ಪೋಸ್ಟ್ ಮಾಡಿದ್ದರು.
ಪ್ರಧಾನಿ ಮೋದಿ ಸೆಪ್ಟೆಂಬರ್22ಕ್ಕೆಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭ ಕಾಗದ ಪತ್ರಗಳ ಪರಿಶೀಲನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಫೋಟೋ ಲಾಲ್ ಬಹದೂರ್ ಶಾಸ್ತ್ರಿಯವರ ನಕಲು ಎಂಬುದು ಕೆಲವು ನೆಟ್ಟಿಗರ ವಾದವಾಗಿದೆ.
ಪ್ರಧಾನಿ ಮೋದಿ ಅವರು ಹಿಂದಿನ ಪ್ರಖ್ಯಾತ ನಾಯಕರ ವೇಷಭೂಷಣ, ಹಾವಭಾವಗಳನ್ನು ನಕಲು ಮಾಡುತ್ತಾರೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿರುತ್ತವೆ. ಛತ್ರಪತಿ ಶಿವಾಜಿ, ರವೀಂದ್ರನಾಥ ಟ್ಯಾಗೋರ್ ಮುಂತಾದವರನ್ನು ನಕಲು ಮಾಡಿದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.