ADVERTISEMENT

ಲಾಲುಗೆ ಅನಾರೋಗ್ಯ: ಕೋರ್ಟ್‌ಗೆ ಗೈರು

ಪಿಟಿಐ
Published 19 ನವೆಂಬರ್ 2018, 19:16 IST
Last Updated 19 ನವೆಂಬರ್ 2018, 19:16 IST

ರಾಂಚಿ : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಅನಾರೋಗ್ಯದ ಕಾರಣ ನ್ಯಾಯಾಲಯದ ವಿಚಾರಣೆಗೆ ಸೋಮವಾರ ಗೈರಾಗಿದ್ದರು.

ಮೇವು ಹಗರಣದ ಇತರ ಆರೋಪಿಗಳಾದ ಮಾಜಿ ಸಂಸದ ಜಗದೀಶ್ ಶರ್ಮಾ, ಆರ್‌.ಕೆ. ರಾಣಾ ಮತ್ತು ಮೂವರು ಮಾಜಿ ಐಎಎಸ್ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಧೀಶ ಪ್ರದೀಪ್ ಕುಮಾರ್ ಎದುರು ಹಾಜರಾದರು.

ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್ ತಪ್ಪಿತಸ್ಥರಾಗಿದ್ದಾರೆ. ಅನಾರೋಗ್ಯದ ಕಾರಣ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಅವರು ಪಡೆಯುತ್ತಿದ್ದಾರೆ.

ADVERTISEMENT

ಲಾಲು ಅವರಿಗೆ ರಕ್ತದೊತ್ತಡ ಹಾಗೂ ಸಕ್ಕರೆ ಪ್ರಮಾಣ ಹೆಚ್ಚಿರುವ ಕಾರಣ ಅವರ ಬಲಗಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಂಡಿವೆ. ಹೀಗಾಗಿ ಅವು ಶೌಚಾಲಯಕ್ಕೆ ನಡೆದು ಹೋಗಲೂ ಕಷ್ಟಪಡುತ್ತಿದ್ದಾರೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ. ರಕ್ತದಲ್ಲಿ ಹೆಚ್ಚಿರುವ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಇನ್ಸುಲಿನ್ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.