ರಾಂಚಿ: ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ತಮ್ಮ ಪಕ್ಷದ ಹೀನಾಯ ಪ್ರದರ್ಶನದಿಂದ ನೊಂದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜೈಲಿನಲ್ಲಿ ಊಟ ತ್ಯಜಿಸಿದ್ದು, ಮೌನವಹಿಸಿದ್ದಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಜನತಾದಳ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಒಂದೂ ಸ್ಥಾನ ಗೆದ್ದಿಲ್ಲ. 2014ರಲ್ಲಿ ಮೋದಿ ಅಲೆಯಲ್ಲಿಯೂ ಆರ್‌ಜೆಡಿ ನಾಲ್ಕು ಸ್ಥಾನ ಗೆದ್ದಿತ್ತು. ಮೇವು ಹಗರಣಕ್ಕೆ ಸಂಬಂಧಿಸಿ ಲಾಲು ಸದ್ಯ ಜೈಲಿನಲ್ಲಿ ಇದ್ದಾರೆ.
ಫಲಿತಾಂಶ ಹೊರಬಿದ್ದ ನಂತರ ಅವರ ದೈನಿಕ ಕಾರ್ಯಕ್ರಮ ಬದಲಾಗಿದೆ. ಉಪಾಹಾರ ಮತ್ತು ರಾತ್ರಿ ಊಟ ಸೇವಿಸುತ್ತಿದ್ದು, ಮಧ್ಯಾಹ್ನ ಊಟ ಮಾಡುತ್ತಿಲ್ಲ’ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ. ಉಮೇಶ್ ಪ್ರಸಾದ್ ತಿಳಿಸಿದರು.
‘ಒಂದು ಹೊತ್ತಿನ ಊಟ ಸೇವಿಸದ ಕಾರಣ ಮೊದಲಿನಂತೆ ಅವರಿಗೆ ನಿಗದಿತ ಔಷಧವನ್ನು ನೀಡಲು ಆಗುತ್ತಿಲ್ಲ. ಜೊತೆಗೆ ದಿನದ ಬಹುತೇಕ ಅವಧಿ ಅವರು ಮೌನವಾಗಿಯೇ ಇರುತ್ತಾರೆ’ ಎಂದು ವೈದ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.