ರುದ್ರಪ್ರಯಾಗ (ಉತ್ತರಾಕಾಂಡ): ರುದ್ರಪ್ರಯಾಗ ಬಳಿಯ ಗೌರಿಕುಂಡದಲ್ಲಿ ಬೃಹತ್ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ, 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇದರನಾಥಕ್ಕಿಂತ 16 ಕಿ.ಮೀ ಹಿಂದೆ ಘಟನೆ ನಡೆದಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.
ಮಳೆಯಿಂದಾಗಿ ಹತ್ತಿರದ ತೆಹ್ರಿ ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಸ್ತೆ ಬದಿಯ ಎರಡು ಅಂಗಡಿಗಳು ಮತ್ತು ಡಾಬಾಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅದರಲ್ಲಿ ನಾಲ್ವರು ಸ್ಥಳೀಯರು ಮತ್ತು 16 ಮಂದಿ ನೇಪಾಳಿ ಮೂಲದವರಿದ್ದರು. ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ (SDRF) ಹೇಳಿದೆ.
ಶುಕ್ರವಾರ ಬಟವಾಡಿ ಪ್ರದೇಶದಲ್ಲಿ ಕಲ್ಲುಗಳು ರಸ್ತೆಗುರುಳಿದ್ದ ಪರಿಣಾಮ 500 ಮೀಟರ್ ದೂರದವರೆಗೆ ಹೆದ್ದಾರಿ ಸ್ಥಗಿತಗೊಂಡಿತ್ತು, ಶನಿವಾರ ಬೆಳಗಿನವರೆಗೂ ಟ್ರಾಫಿಕ್ ಸಮಸ್ಯೆಯನ್ನು ವಾಹನ ಸವಾರರು ಎದುರಿಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.