ADVERTISEMENT

ಭೂ ಕುಸಿತ: ಅರುಣಾಚಲದ 7 ಜಿಲ್ಲೆಗಳಿಗೆ ಸಂಪರ್ಕ ಕಡಿತ

ಪಿಟಿಐ
Published 4 ಜುಲೈ 2024, 15:57 IST
Last Updated 4 ಜುಲೈ 2024, 15:57 IST
<div class="paragraphs"><p>ಭಾರಿ ಮಳೆಯಿಂದ ನೆರೆಗೆ ಸಿಲುಕಿದ ಅರುಣಾಚಲ ಪ್ರದೇಶವೊಂದರಲ್ಲಿ ಮಂಗಳವಾರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಬಾಲಕಿಯೊಬ್ಬಳನ್ನು ರಕ್ಷಿಸಿ ಕರೆತಂದರು  </p></div>

ಭಾರಿ ಮಳೆಯಿಂದ ನೆರೆಗೆ ಸಿಲುಕಿದ ಅರುಣಾಚಲ ಪ್ರದೇಶವೊಂದರಲ್ಲಿ ಮಂಗಳವಾರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಬಾಲಕಿಯೊಬ್ಬಳನ್ನು ರಕ್ಷಿಸಿ ಕರೆತಂದರು

   

–ಪಿಟಿಐ ಚಿತ್ರ

ಇಟಾನಗರ: ಅರುಣಾಚಲ ಪ್ರದೇಶದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗುರುವಾರ ಭೂಕುಸಿತ ಸಂಭವಿಸಿದ್ದು, ಏಳು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಸಿಯಾಂಗ್, ಪೂರ್ವ ಸಿಯಾಂಗ್, ಮೇಲ್ಭಾಗದ ಸಿಯಾಂಗ್, ಪಶ್ಚಿಮ ಸಿಯಾಂಗ್, ಶಿ ಯೊಮಿ, ಲೆಪರದಾ ಮತ್ತು ಮೇಲ್ಭಾಗದ ಸುಬಾನ್ಸಿರಿ ಜಿಲ್ಲೆಗಳಲ್ಲಿ ಭೂಕುಸಿತವಾಗಿದೆ.

ಗುರುವಾರ ಬೆಳಿಗ್ಗೆ ಸಂಭವಿಸಿದ ಭೂಕುಸಿತದಿಂದ ಪಾಸಿಘಾಟ್–ಪಂಗಿನ್–ಆಲೊ ಮಾರ್ಗದ ರಾಷ್ಟ್ರೀಯ ಹೆದ್ದಾರಿ–13 ಮುಚ್ಚಿಹೋಗಿದೆ. ಬೃಹತ್ತಾದ ಬಂಡೆಗಲ್ಲು ರಸ್ತೆಗೆ ಬಿದ್ದಿದ್ದರಿಂದಾಗಿ ಲೋಕ್‌ಪೆಂಗ್ ಮತ್ತು ಪಂಗಿನ್ ನಡುವಿನ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.