ಅಮೃತಸರ: ಅಟಾರಿ ಗಡಿ ಪ್ರದೇಶದ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ 532 ಕೆಜಿ ಹೆರಾಯಿನ್ ಅನ್ನು ಸುಂಕ ವಿಭಾಗವು ವಶಕ್ಕೆ ಪಡೆದಿದ್ದು, ಇದರ ಬೆಲೆ ₹2,700 ಕೋಟಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆರಾಯಿನ್ ಮತ್ತು ಇತರ 52 ಕೆ.ಜಿ ಶಂಕಿತ ಮಾದಕ ದ್ರವ್ಯವನ್ನು ಮೂಟೆಗಳಲ್ಲಿ ತುಂಬಿ ಕಲ್ಲುಪ್ಪು ಸಾಗಿಸುವವಾಹನದಲ್ಲಿ ಸಾಗಿಸಲಾಗುತ್ತಿತ್ತು. ಪಾಕಿಸ್ತಾನದ ಅಟಾರಿ ಬಳಿ ವಾಹನ ಬಂದಾಗ ಚೆಕ್‌ಪೋಸ್ಟ್ ಬಳಿ ಈ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಂಕ ಆಯುಕ್ತ ದೀಪಕ್ ಕುಮಾರ್ ಗುಪ್ತ ಹೇಳಿದ್ದಾರೆ.
ಈ ಮೂಲಕಅಮೃತ್‌ಸರದ ಸುಂಕ (ತಡೆಗಟ್ಟುವಿಕೆ) ಆಯುಕ್ತಾಲಯ ಅಂತರರಾಷ್ಟ್ರೀಯ ಸಂಘಟಿತ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಜಾಲ ಭೇದಿಸಿದಂತಾಗಿದೆ.
ಭಾರತೀಯ ಸುಂಕ ವಿಭಾಗದ ಇತಿಹಾಸದಲ್ಲಿಯೇ ಇಷ್ಟೊಂದು ಅಪಾರ ಪ್ರಮಾಣದ ಮಾದಕ ದ್ರವ್ಯ ಪತ್ತೆ ಮಾಡಲಾಗಿದೆ. ಶನಿವಾರ ರಾತ್ರಿ 1.30ರ ಸುಮಾರಿಗೆ ಕಲ್ಲುಪ್ಪು ಸಾಗಾಣಿಕೆಯ ವಾಹನವೊಂದರ ತಪಾಸಣೆ ಮಾಡುತ್ತಿದ್ದಾಗ, ಹೆರಾಯಿನ್ ಪತ್ತೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.