ADVERTISEMENT

ಕಾರ್ಗಿಲ್‌ ವಿಜಯ ದಿವಸ: ನೀರಿನೊಳಗೆ ಕ್ಯಾ.ವಿಕ್ರಂ ಬಾತ್ರ ಭಾವಚಿತ್ರ ಪ್ರದರ್ಶನ

ವಿಶ್ವ ದಾಖಲೆಗೆ ಸೇರ್ಪಡೆ

ಪಿಟಿಐ
Published 26 ಜುಲೈ 2022, 13:41 IST
Last Updated 26 ಜುಲೈ 2022, 13:41 IST
ಪಂಗೋಡೆ ಸೇನಾ ಕೇಂದ್ರದಲ್ಲಿ ಕಲಾವಿದ ‘ಡಾ–ವಿಂಚಿ’ ಸುರೇಶ್ ಅವರು ಹುತಾತ್ಮ ಪರಮ ವೀರ ಚಕ್ರ ಕ್ಯಾ.ವಿಕ್ರಂ ಬಾತ್ರ ಅವರ ಭಾವಚಿತ್ರವನ್ನು ನೀರಿನೊಳಗೆ ಪ್ರದರ್ಶಿಸಿದರು.
ಪಂಗೋಡೆ ಸೇನಾ ಕೇಂದ್ರದಲ್ಲಿ ಕಲಾವಿದ ‘ಡಾ–ವಿಂಚಿ’ ಸುರೇಶ್ ಅವರು ಹುತಾತ್ಮ ಪರಮ ವೀರ ಚಕ್ರ ಕ್ಯಾ.ವಿಕ್ರಂ ಬಾತ್ರ ಅವರ ಭಾವಚಿತ್ರವನ್ನು ನೀರಿನೊಳಗೆ ಪ್ರದರ್ಶಿಸಿದರು.   

ತಿರುವನಂತಪುರ: ಕಾರ್ಗಿಲ್‌ ವಿಜಯ ದಿವಸದ ಹಿನ್ನೆಲೆಯಲ್ಲಿ ಇಲ್ಲಿನ ಪಂಗೋಡೆ ಸೇನಾ ಕೇಂದ್ರದಲ್ಲಿ ಕಲಾವಿದ ‘ಡಾ–ವಿಂಚಿ’ ಸುರೇಶ್ ಅವರು ಹುತಾತ್ಮ ಪರಮ ವೀರ ಚಕ್ರ ಕ್ಯಾ.ವಿಕ್ರಂ ಬಾತ್ರ ಅವರ ಭಾವಚಿತ್ರವನ್ನು ನೀರಿನೊಳಗೆ ಪ್ರದರ್ಶಿಸಿದರು.

‘ಭಾರತೀಯ ಸೇನೆ ಬಾಂಡ್‌ ವಾಟರ್‌ ಸ್ಪೋರ್ಟ್ ಪ್ರೈ.ಲಿ. ಸ್ಕೂಬಾ ತಂಡದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು. ನೀರಿನ ಒಳಗಿನಿಂದ ಪ್ರದರ್ಶಿಸಲಾದಕ್ಯಾ.ಬಾತ್ರ ಅವರ ಅತಿ ದೊಡ್ಡ ಭಾವಚಿತ್ರವು ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದೆ. ಟೈಲ್ಸ್ ಬಳಸಿ ರಚಿಸಲಾದ 1500 ಚದರ ಅಡಿ ಭಾವಚಿತ್ರ ಪ್ರದರ್ಶನಕ್ಕೆ ಕಲಾವಿದರು 8 ಗಂಟೆ ತೆಗೆದುಕೊಂಡಿದ್ದರು’ ಎಂದು ರಕ್ಷಣಾ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.