ADVERTISEMENT

ಸಲ್ಮಾನ್ ಖಾನ್‌ ಹತ್ಯೆಗೆ ನಡೆದಿತ್ತು ಬಾಲಕರ ನಿಯೋಜನೆಯ ಸಂಚು: ಪೊಲೀಸ್

ಪಿಟಿಐ
Published 3 ಜೂನ್ 2024, 16:25 IST
Last Updated 3 ಜೂನ್ 2024, 16:25 IST
ಸಲ್ಮಾನ್ ಖಾನ್‌
ಸಲ್ಮಾನ್ ಖಾನ್‌   

ಮುಂಬೈ: ಲಾರೆನ್ಸ್ ಬಿಷ್ಣೋಯ್ ಹಾಗೂ ಗೋಲ್ಡಿ ಬ್ರಾರ್ ಗ್ಯಾಂಗ್‌ಗಳು 18 ವರ್ಷದೊಳಗಿನ ಬಾಲಕರನ್ನು ನಟ ಸಲ್ಮಾನ್ ಖಾನ್ ಹತ್ಯೆ ಮಾಡಲು ಬಳಸಿಕೊಳ್ಳಲು ನಿರ್ಧರಿಸಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 

ತನಿಖೆ ನಡೆಸಿದಾಗ, ಲಾರೆನ್ಸ್‌ ಗ್ಯಾಂಗ್‌ನ ಸದಸ್ಯ ಅಜಯ್ ಕಶ್ಯಪ್ ಹಾಗೂ ಇನ್ನೊಬ್ಬ ಆರೋಪಿ ನಡುವಿನ ವಿಡಿಯೊ ಕರೆಯ ಸಂಭಾಷಣೆಯಿಂದ ಈ ವಿಷಯ ದೃಢಪಟ್ಟಿದೆ ಎಂದು ನವಿ ಮುಂಬೈ ಪೊಲೀಸರು ಹೇಳಿದ್ದಾರೆ. 

ಆಧುನಿಕ ಶಸ್ತ್ರಾಸ್ತ್ರ ಬಳಕೆಯಲ್ಲಿ ಕೈಪಳಗಿಸಿಕೊಂಡ ಶಾರ್ಪ್‌ಶೂಟರ್‌ಗಳನ್ನು ಮುಂಬೈ, ಠಾಣೆ, ನವಿ ಮುಂಬೈ ಪುಣೆ, ರಾಯಗಢ ಹಾಗೂ ಗುಜರಾತ್‌ನ ಕೆಲವೆಡೆ ನಿಯೋಜಿಸಲು ಯೋಜಿಸಲಾಗಿತ್ತು. ಕೆನಡಾದಲ್ಲಿ ನೆಲೆಸಿರುವ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್ ಆದೇಶದಂತೆ ಈ ರೀತಿ ಆಲೋಚಿಸಲಾಗಿತ್ತು ಎನ್ನುವುದು ಸಂಭಾಷಣೆಯಿಂದ ಗೊತ್ತಾಗಿದೆ ಎಂದಿದ್ದಾರೆ. 

ADVERTISEMENT

ಜಾನ್ ಎಂಬಾತ ಹತ್ಯೆ ಕಾರ್ಯಾಚರಣೆಗೆ ವಾಹನ ಪೂರೈಸಲು ನಿಯೋಜಿತನಾಗಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

ಸಲ್ಮಾನ್ ಹತ್ಯೆ ನಡೆಸಿದ ನಂತರ ಎಲ್ಲರೂ ಕನ್ಯಾಕುಮಾರಿಯಲ್ಲಿ ಒಂದೆಡೆ ಸೇರಿ, ಅಲ್ಲಿಂದ ಸಮುದ್ರ ಮಾರ್ಗದಲ್ಲಿ ಶ್ರೀಲಂಕಾ ತಲುಪುವುದು. ಆಮೇಲೆ ವಿವಿಧ ದೇಶಗಳಿಗೆ ಒಬ್ಬೊಬ್ಬರನ್ನೂ ಹವಾನಿಸುವುದು ಎಂದು ಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಟ ಸಲ್ಮಾನ್ ಚಲನವಲನಗಳ ಮೇಲೆ ನಿಗಾ ಮಾಡಲೆಂದೇ 60–70 ಜನರನ್ನು ನಿಯೋಜಿಸಲು ತಂತ್ರ ಹೆಣೆಯಲಾಗಿತ್ತು ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.