ADVERTISEMENT

ಲಾರೆನ್ಸ್ ಬಿಷ್ಣೋಯಿ ಸಂದರ್ಶನಕ್ಕೆ ಅವಕಾಶ: ಗೃಹ ಇಲಾಖೆಯ 7 ಮಂದಿ ಅಮಾನತು

ಪಿಟಿಐ
Published 26 ಅಕ್ಟೋಬರ್ 2024, 13:56 IST
Last Updated 26 ಅಕ್ಟೋಬರ್ 2024, 13:56 IST
<div class="paragraphs"><p>ಲಾರೆನ್ಸ್‌ ಬಿಷ್ಣೋಯಿ</p></div>

ಲಾರೆನ್ಸ್‌ ಬಿಷ್ಣೋಯಿ

   

–ಪಿಟಿಐ ಚಿತ್ರ

ಚಂಡೀಗಢ: ಪೊಲೀಸರ ವಶದಲ್ಲಿದ್ದ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯಿ ಅವರನ್ನು ಸಂದರ್ಶನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಇಬ್ಬರು ಡಿಎಸ್‌ಪಿಗಳು ಸೇರಿದಂತೆ ಏಳು ಮಂದಿ ಪೊಲೀಸರನ್ನು ಪಂಜಾಬ್‌ ಪೊಲೀಸ್‌ ಇಲಾಖೆ ಅಮಾನತುಗೊಳಿಸಿದೆ.

ADVERTISEMENT

ಈ ಕುರಿತು ತನಿಖೆ ನಡೆಸಲು ವಿಶೇಷ ಡಿಜಿಪಿ (ಮಾನವ ಹಕ್ಕು) ನೇತೃತ್ವದಲ್ಲಿ ಪೊಲೀಸ್‌ ಇಲಾಖೆಯು ಎಸ್‌ಐಟಿ ರಚಿಸಿತ್ತು. ಪಂಜಾಬ್‌ ಪೊಲೀಸ್‌ ವಶದಲ್ಲಿದ್ದ ವೇಳೆ ಮೊಹಾಲಿಯ ಕರಾರ್‌ನಲ್ಲಿ ಮೊದಲ ಸಂದರ್ಶನ ನೀಡಲಾಗಿತ್ತು. ರಾಜಸ್ಥಾನದಲ್ಲಿ ಎರಡನೇ ಬಾರಿ ಸಂದರ್ಶನ ನಡೆಸಲಾಗಿತ್ತು.

ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಅಡಿಯಲ್ಲಿ ಇಲಾಖೆಯು ಅಮಾನತು ಆದೇಶ ಹೊರಡಿಸಿದೆ.

ಎಸ್ಪಿ ಗುರ್ಶೇರ್‌ ಸಿಂಗ್‌ ಸಂಧು, ಡಿಎಸ್‌ಪಿ ಸಮ್ಮರ್‌ ವನೀತ್‌, ಸನ್‌ ಇನ್‌ಸ್ಪೆಕ್ಟರ್‌ಗಳಾದ ರೀನಾ, ಜಗತ್‌ಪಾಲ್‌ ಜಂಗು, ಸಂಗಜಿತ್‌ ಸಿಂಗ್‌, ಎಎಸ್‌ಐ ಮುಕ್ತಿಯಾರ್‌ ಸಿಂಗ್‌, ಹೆಡ್‌ ಕಾನ್‌ಸ್ಟೆಬಲ್‌ ಓಂಪ್ರಕಾಶ್‌ ಅವರನ್ನು ಅಮಾನತುಗೊಳಿಸಿ ಪಂಜಾಬ್‌ನ ಗೃಹ ಸಚಿವಾಲಯವು ಶುಕ್ರವಾರ ಆದೇಶ ಹೊರಡಿಸಿದೆ. 

ಅತ್ಯಂತ ಸೂಕ್ಷ್ಮ ಪ್ರಕರಣವಾಗಿರುವ ಕಾರಣ, ಎಲ್ಲರನ್ನೂ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2022ರ ಸೆ.3 ಹಾಗೂ 4ರಂದು ಖಾಸಗಿ ಸುದ್ದಿ ವಾಹಿನಿಯೊಂದು ಬಿಷ್ಣೋಯಿಯನ್ನು ಸಂದರ್ಶನ ನಡೆಸಿತ್ತು. ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಈ ಸಂದರ್ಶನ ಪ್ರಸಾರಗೊಂಡಿತ್ತು. 

ಮೊದಲ ಸಂದರ್ಶನವು ಮೊಹಾಲಿಯ ಕರಾರ್‌ನ ಅಪರಾಧ ತನಿಖಾ ಸಂಸ್ಥೆಯ ಆವರಣದಲ್ಲಿಯೇ ನಡೆದಿತ್ತು. ಜೈಪುರದ ಸೆಂಟ್ರಲ್‌ ಜೈಲಿನಲ್ಲಿ ಎರಡನೇ ಸಂದರ್ಶನ ನಡೆಸಲಾಗಿತ್ತು ಎಂದು ಎಸ್‌ಐಟಿ ವರದಿಯಲ್ಲಿ ತಿಳಿಸಲಾಗಿದೆ.

ಪಂಜಾಬ್‌ನನ ಗಾಯಕ ಸಿಧು ಮೂಸೆವಾಲಾ ಅವರ ಕೊಲೆ ಪ್ರಕರಣದಲ್ಲಿ ಬಿಷ್ಣೋಯಿ ಮುಖ್ಯ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.