ADVERTISEMENT

TN ಡಿಸಿಎಂ ಉದಯನಿಧಿ ಜೀನ್ಸ್‌, ಟಿ–ಶರ್ಟ್‌ ಧರಿಸುವುದನ್ನು ಪ್ರಶ್ನಿಸಿ HCಗೆ ಅರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2024, 12:50 IST
Last Updated 19 ಅಕ್ಟೋಬರ್ 2024, 12:50 IST
<div class="paragraphs"><p>ಉದಯನಿಧಿ ಸ್ಟಾಲಿನ್</p></div>

ಉದಯನಿಧಿ ಸ್ಟಾಲಿನ್

   

ಚೆನ್ನೈ: ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ಶನಿವಾರ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, 2019ರ ಸರ್ಕಾರದ ಆದೇಶದ ಪ್ರಕಾರ ಔಪಚಾರಿಕ ವಸ್ತ್ರ ಸಂಹಿತೆಯನ್ನು ಅನುಸರಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಉದಯನಿಧಿ ಅವರು ಧರಿಸುವ ಜೀನ್ಸ್‌ ಪ್ಯಾಂಟ್‌, ಟಿ–ಶರ್ಟ್ ಮತ್ತು ಅನೌಪಚಾರಿಕ ಪಾದರಕ್ಷೆಗಳನ್ನು ಸರ್ಕಾರದ ಔಪಚಾರಿಕ ವಸ್ತ್ರ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಬೇಕು ಎಂದು ವಕೀಲ ಎಂ. ಸತ್ಯಕುಮಾರ್ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಡಿಎಂಕೆ ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವುದು ಸಾಂವಿಧಾನಿಕ ನಿಬಂಧನೆಗಳು ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ. ಈ ಕ್ರಮಗಳು ಅಸಂವಿಧಾನಿಕ ಮತ್ತು ಕಾನೂನುಬಾಹಿರವೆಂದು ಪರಿಗಣಿಸುವಂತೆ ಅರ್ಜಿಯಲ್ಲಿ ಸತ್ಯಕುಮಾರ್ ಕೋರಿದ್ದಾರೆ.

ಡಿಎಂಕೆ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಎಂ. ಕರುಣಾನಿಧಿ ಅವರು ಪಾಶ್ಚಿಮಾತ್ಯ ಶೈಲಿಯ ಶರ್ಟ್‌ಗಳನ್ನು ಸಾಂಪ್ರದಾಯಿಕ ಉಡುಪುಗಳೊಂದಿಗೆ (ಧೋತಿ) ಧರಿಸುವುದನ್ನು ಅಳವಡಿಸಿಕೊಂಡಿದ್ದರು. ಈ ರೀತಿಯ ಉಡುಗೆಗಳ ಸಂಯೋಜನೆಯು ಡಿಎಂಕೆಯ ಆಧುನಿಕತೆ ಮತ್ತು ತಮಿಳುನಾಡಿನ ಹೆಮ್ಮೆ ಎರಡನ್ನೂ ಪ್ರತಿನಿಧಿಸಿದಂತಾಗುತ್ತದೆ ಎಂದು ಕುಮಾರ್ ಹೇಳಿದ್ದಾರೆ.

ಉದಯನಿಧಿ ಅವರು ಜನಪ್ರತಿನಿಧಿಯಾಗಿದ್ದು, ಸರ್ಕಾರದ ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವಾಗ ರಾಜಕೀಯ ಪಕ್ಷದ ಚಿಹ್ನೆಯನ್ನೊಳಗೊಂಡ ಉಡುಪುಗಳನ್ನು ಧರಿಸುವಂತಿಲ್ಲ. ಇದು ಕಾನೂನಿನ ಉಲ್ಲಂಘನೆಯೂ ಕೂಡ ಎಂದು ಕುಮಾರ್ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.