ಕಾಸರಗೋಡು(ಕೇರಳ): ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾದ ಅಣಕು ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ(ಇವಿಎಂ) ದಾಖಲಾದ ಮತವು ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿದೆ ಎಂದು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಆರೋಪಿಸಿದೆ.
ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಅದು ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಸಿಪಿಐ(ಎಂ) ಹಿರಿಯ ನಾಯಕ ಕೆ.ಪಿ. ಸತೀಶ್ ಚಂದ್ರನ್, ಬುಧವಾರ ನಡೆದ ಅಣಕು ಮತದಾನದ ವೇಳೆ ಎರಡು ಮೂರು ಮತಯಂತ್ರಗಳಲ್ಲಿ ಆ ರೀತಿಯ ದೋಷ ಕಂಡುಬಂದಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
ಏಪ್ರಿಲ್ 26ರಂದು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಸಿಪಿಐ(ಎಂ)ನಿಂದ ಎಂ.ವಿ. ಬಾಲಕೃಷ್ಣನ್, ಕಾಂಗ್ರೆಸ್ ನಾಯಕ ಮತ್ತು ಹಾಲಿ ಸಂಸದ ರಾಜಮೋಹನ್ ಉನ್ನಿತ್ತನ್ ಹಾಗೂ ಬಿಜೆಪಿಯಿಂದ ಎಂ.ಎಲ್. ಅಶ್ವಿನಿ ಸ್ಪರ್ಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.