ADVERTISEMENT

ಇಂದಿರಾ ಜೈಲಿಗೆ ಹಾಕಿದ್ದ ನಾಯಕರಿಂದಲೇ ಈಗ ರಾಹುಲ್‌ಗೆ ಸ್ವಾಗತ: ನಡ್ಡಾ

ಪಿಟಿಐ
Published 23 ಜೂನ್ 2023, 16:06 IST
Last Updated 23 ಜೂನ್ 2023, 16:06 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಭವಾನಿಪಟ್ನಾ, ಒಡಿಶಾ: ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಜೈಲಿಗೆ ಹಾಕಿದ್ದ ನಾಯಕರೇ ಈಗ ಅವರ ಮೊಮ್ಮಗ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ.

ಪಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಲಾಲು ಪ್ರಸಾದ್ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಪಾಲ್ಗೊಂಡಿದ್ದ ಸಭೆಯನ್ನು ಉಲ್ಲೇಖಿಸಿ ಮಾತನಾಡಿದರು. ಈ ಇಬ್ಬರು ಮುಖಂಡರನ್ನು ತುರ್ತುಪರಿಸ್ಥಿತಿ ವೇಳೆ ಬಂಧಿಸಲಾಗಿತ್ತು ಎಂದರು.

ಇಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಇಂದು ರಾಜಕೀಯದಲ್ಲಿ ವಿಪರ್ಯಾಸದ ಸಂಗತಿಗಳು ನಡೆಯುತ್ತಿವೆ. ಲಾಲು ಪ್ರಸಾದ್‌ ಅವರನ್ನು 22 ತಿಂಗಳು, ನಿತೀಶ್ ಕುಮಾರ್ ಅವರನ್ನು 20 ತಿಂಗಳು ಜೈಲಿಗೆ ಹಾಕಲಾಗಿತ್ತು ಎಂದರು.

ADVERTISEMENT

‘ಈಗ ಸಭೆಗೆ ಉದ್ಧವ್‌ ಠಾಕ್ರೆ ಬಂದಿದ್ದಾರೆ. ಅವರ ತಂದೆ ಭಾಳಾಸಾಹೇಬ್ ಠಾಕ್ರೆ ಕಾಂಗ್ರೆಸ್‌ ವಿರೋಧಿಸಿದ್ದರು. ಕಾಂಗ್ರೆಸ್‌ ಜೊತೆ ಸೇರುವ ಬದಲು ನಾನು ದುಕಾನ್ (ಶಿವಸೇನೆ) ಬಂದ್ ಮಾಡುತ್ತೇನೆ ಎಂದು ಭಾಳಾಸಾಹೇಬ್ ಠಾಕ್ರೆ ಒಮ್ಮೆ ಹೇಳಿದ್ದರು’ ಎಂದು ನಡ್ಡಾ ಸ್ಮರಿಸಿದರು.

ಪ್ರಧಾನಿ ಮೋದಿ ಅವರಿಗೆ ವಿಶ್ವದ ನಾಯಕರು ಶ್ಲಾಘಿಸುವುದನ್ನು ಸಹಿಸಲು ಆಗುತ್ತಿಲ್ಲ. ಮೋದಿ ಅವರು ವಂಶಾಡಳಿತದ ರಾಜಕಾರಣ ವಿರೋಧಿಸುತ್ತಿದ್ದು, ದೇಶಕ್ಕೆ ಅಭಿವೃದ್ಧಿ ರಾಜಕಾರಣ ಪರಿಚಯಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.