ಬಿಕಾನೇರ್: ಬಿಕಾನೇರ್ನಲ್ಲಿ ಪಾಕಿಸ್ತಾನಿಗಳು ವಾಸವಾಗಿದ್ದರೆ 48 ಗಂಟೆಗಳೊಳಗೆ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಬಿಕಾನೇರ್ ಜಿಲ್ಲಾಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕುಮಾರ್ ಪಾಲ್ ಗೌತಂ ಈ ಆದೇಶ ಹೊರಡಿಸಿದ್ದು ಪಾಕಿಸ್ತಾನಿಗಳ ಜತೆ ಪ್ರತ್ಯಕ್ಷ ಅಥವಾ ಪರೋಕ್ಷ ವ್ಯವಹಾರ, ಉದ್ಯೋಗ ಮತ್ತು ಕೆಲಸದ ಮಾಹಿತಿಗಳ ಬಗ್ಗೆ ಸಂವಹನ ಮಾಡಬಾರದೆಂದು ಹೇಳಿದ್ದಾರೆ.
ಬಿಕಾನೇರ್ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಯಾವುದೇ ಹೋಟೆಲ್, ಮನೆ ಅಥವಾ ಆಸ್ಪತ್ರೆಯಲ್ಲಿ ಪಾಕ್ ಪ್ರಜೆಗಳಿದ್ದರೆ ತಕ್ಷಣವೇ ಅಲ್ಲಿಂದ ಹೊರಹೋಗಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಪುಲ್ವಾಮ ಆತ್ಮಾಹುತಿ ದಾಳಿ ನಂತರ ಇಲ್ಲಿನ ಸ್ಥಳೀಯರಿಗೆ ಪಾಕಿಸ್ತಾನಿಗಳ ಮೇಲೆ ದ್ವೇಷ ಹೆಚ್ಚಿದೆ.ಹಾಗಾಗಿಸುರಕ್ಷಾ ದೃಷ್ಟಿಯಿಂದ ಪಾಕ್ ಪ್ರಜೆಗಳು ಬಿಕಾನೇರ್ ಬಿಟ್ಟು ಹೋಗುವುದು ಸೂಕ್ತ ಎಂದು ಇಲ್ಲಿನ ಆಡಳಿತಾಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯಲ್ಲಿ ಪಾಕ್ ನೋಂದಾಣಿಯಾಗಿರುವ ಸಿಮ್ ಕಾರ್ಡ್ ಬಳಕೆಯನ್ನು ನಿಷೇಧಿಸಿರುವ ಜಿಲ್ಲಾಧಿಕಾರಿ ಈ ಆದೇಶ ಎರಡು ತಿಂಗಳು ಅಥವಾ ಆದೇಶ ಹಿಂಪಡೆಯುವ ಸೂಚನೆಯ ದಿನಾಂಕವರೆಗೆ ಜಾರಿಯಲ್ಲಿರಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.