ಬೈರೂತ್: ‘ಹಿಜ್ಬುಲ್ಲಾ ಈಗ ಹಿಂದಿಗಿಂತ ಸಾವಿರ ಪಟ್ಟು ಬಲಶಾಲಿಯಾಗಿದೆ’ ಎಂದು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರ ಪಡೆಯ ಅಧಿಕಾರಿ ಹಶೇಮ್ ಸಫೀದ್ದೀನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುರೋಪಿಯನ್ನರು ಇನ್ನು ಮುಂದೆ ಜಾಗರೂಕತೆಯಿಂದ ಇರಬೇಕು. ನಮ್ಮ ಪ್ರತಿರೋಧದ ವಿಚಾರವಾಗಿ ನೀವು ಮೂಗುತೂರಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ’ ಎಂದಿದ್ದಾರೆ.
ಹಮಾಸ್ ಬಂಡುಕೋರರಿಗೆ ಬೆಂಬಲ ಸೂಚಿಸಿರುವ ಹಿಜ್ಬುಲ್ಲಾ ಪಡೆಯು ಲೆಬನಾನ್ ಗಡಿಯಲ್ಲಿ ಇಸ್ರೇಲ್ ಸೇನೆ ಜೊತೆ ಸಂಘರ್ಷಕ್ಕಿಳಿದಿದೆ. ಲೆಬನಾನ್ ಮತ್ತು ಹಮಾಸ್‌ಗೆ ಬೆಂಬಲ ನೀಡದಂತೆ ಅಮೆರಿಕವು ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಹಶೇಮ್ ಹೀಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.