ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ: ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ

ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2020, 6:09 IST
Last Updated 10 ಫೆಬ್ರುವರಿ 2020, 6:09 IST
   

‌ನವದೆಹಲಿ: ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ಕುರಿತಂತೆಇರುವ ಕಾನೂನು ತೊಡಕುಗಳ ಬಗ್ಗೆ ವಿಸ್ತೃತ ಪೀಠದ ವಿಚಾರಣೆಗೆ ಅವಕಾಶ ಕಲ್ಪಿಸುವ ಕ್ರಮವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿಯಿತು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ 9 ಸದಸ್ಯರ ನ್ಯಾಯಪೀಠವು, ತೀರ್ಪು ಮರುಪರಿಶೀಲಿಸುವ ಅಧಿಕಾರದ ಜೊತೆಗೆ, ಕಾನೂನು ತೊಡಕುಗಳನ್ನು ಪರಿಶೀಲಿಸುವಂತೆ ವಿಸ್ತೃತ ನ್ಯಾಯಪೀಠಕ್ಕೆ ಸೂಚಿಸುವ ಅಧಿಕಾರವೂ ಸುಪ್ರೀಂ ಕೋರ್ಟ್‌ಗೆ ಇದೆ ಎಂದು ಅಭಿಪ್ರಾಯಪಟ್ಟಿತು.

ಇದೇ ಸಂದರ್ಭ ನ್ಯಾಯಪೀಠವು ಪರಿಶೀಲಿಸಬೇಕಾದ ವಿಷಯಗಳನ್ನೂ ನ್ಯಾಯಾಲಯವು ಸ್ಪಷ್ಟಪಡಿಸಿತು.

ADVERTISEMENT

ಶಬರಿಮಲೆ ಪ್ರಕರಣದ ವಿಚಾರಣೆ ಫೆ.17ರಿಂದ ಮತ್ತೆ ಆರಂಭವಾಗಲಿದೆ. ಇಬ್ಬರೂವಕೀಲರಿಗೆವಾದ ಮಂಡನೆಗೆ ತಲಾ ಒಂದು ದಿನಗಳ ಅವಕಾಶ ಸಿಗಲಿದೆ. ಪೂರಕ ವಾದಕ್ಕಾಗಿ ಎರಡು ತಾಸು ಸಮಯ ನೀಡಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿತು.

ವಿಸ್ತೃತ ನ್ಯಾಯಪೀಠವುಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳನ್ನುಸಂವಿಧಾನ ಮತ್ತು ಶ್ರದ್ಧೆಗಳನ್ನು ಆಧರಿಸಿ ವಿಚಾರಣೆ ನಡೆಸಲಿದೆ ಎಂದು ನ್ಯಾಯಪೀಠವು ಹೇಳಿತು.ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ, ವೈಯಕ್ತಿಕ ಶ್ರದ್ಧೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಸಂಬಂಧಿಸಿದ ವಿಷಯಗಳೂ ಈ ಪ್ರಶ್ನೆಗಳಲ್ಲಿ ಸೇರಿದೆ.

ಸಂವಿಧಾನದ 25ನೇ ವಿಧಿಯ ಅನ್ವಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿವಿಧ ಮತಶ್ರದ್ಧೆಗಳಿಗೆ ಸಂಬಂಧಿಸಿದವಿಚಾರಗಳನ್ನೂವಿಸ್ತೃತ ನ್ಯಾಯಪೀಠವು ಪರಿಶೀಲಿಸುತ್ತದೆ ಎಂದು ಬೊಬಡೆ ನೇತೃತ್ವದ ನ್ಯಾಯಪೀಠವು ಘೋಷಿಸಿತು.

ಸಂವಿಧಾನದ 25 (2)(ಬಿ) ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ‘ಹಿಂದೂ ಸಮುದಾಯಗಳು‘ (ಸೆಕ್ಷನ್ಸ್ ಆಫ್ ಹಿಂದೂಸ್) ಪದಗುಚ್ಛದ ಅರ್ಥದ ಜೊತೆಗೆ ಧಾರ್ಮಿಕ ಆಚರಣೆಗಳ ಬಗ್ಗೆಯೂ ವಿಸ್ತೃತ ನ್ಯಾಯಪೀಠವು ನ್ಯಾಯಾಂಗ ಪರಿಶೀಲನೆ ನಡೆಸಲಿದೆ ಎಂದು ಹೇಳಿತು.

ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿರದ ವ್ಯಕ್ತಿಗೆ ಮತ್ತೊಂದು ಧರ್ಮದ ಆಚರಣೆಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವ ಅಧಿಕಾರವಿದೆಯೇ ಎಂಬ ಬಗ್ಗೆಯೂ ಸುಪ್ರೀಂ ಕೋರ್ಟ್‌ ತನ್ನ ನಿಲುವು ಸ್ಪಷ್ಟಪಡಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.