ಬೆಂಗಳೂರು: ಖ್ಯಾತ ಸಾರಂಗಿ ವಾದಕ ಪಂಡಿತ್ ರಾಮ್ ನಾರಾಯಣ್ ಅವರು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ರಾಮ್ ನಾರಾಯಣ್ ಅವರ ನಿಧನಕ್ಕೆ ಮಹಾರಾಷ್ಟ್ರ ರಾಜ್ಯಪಾಲರು, ಸಂಗೀತ ನಾಟಕ ಅಕಾಡೆಮಿ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿವೆ.
ರಾಜಸ್ಥಾನ ಮೂಲದ ರಾಮ್ ನಾರಾಯಣ್ ಅವರು 1927 ರಲ್ಲಿ ರಾಜಸ್ಥಾನದ ಮೇವಾಡದಲ್ಲಿ ಜನಿಸಿದ್ದರು. ಉದಯಪುರ ಮೂಲದ ಅವರು ಸಾರಂಗಿ ಮಾಂತ್ರಿಕ ಎಂದು ಗುರುತಿಸಿಕೊಂಡಿದ್ದರು. ಹಿಂದೂಸ್ತಾನಿ ಸಂಗೀತದಲ್ಲಿಯೂ ವಿದ್ವಾಂಸರಾಗಿದ್ದರು.
ಅವರಿಗೆ ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.