ಹೈದರಾಬಾದ್: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿ ಬೃಹತ್ ನಂದಿ ವಿಗ್ರಹ ಒಳಗೊಂಡಿರುವ ಪ್ರಸಿದ್ಧ ವೀರಭದ್ರ ಸ್ವಾಮಿ ದೇವಾಲಯವು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು (2022) ತಾತ್ಕಾಲಿಕ ಪಟ್ಟಿಗೆ ಸೇರಿದೆ.
ಲೇಪಾಕ್ಷಿ ದೇವಾಲಯವು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ.ವಿಜಯನಗರ ವಾಸ್ತುಶೈಲಿಯನ್ನು ಪ್ರತಿಬಿಂಬಿಸುವಅದ್ಭುತ ಶಿಲ್ಪಕಲೆಯನ್ನು ಈ ದೇವಾಲಯ ಒಳಗೊಂಡಿದೆ.
ದೇವಾಲಯದಿಂದ ಸುಮಾರು 250 ಮೀಟರ್ ದೂರದಲ್ಲಿ ಕುಳಿತ ಭಂಗಿಯಲ್ಲಿರುವ ಏಕಶಿಲಾ ನಂದಿ ವಿಗ್ರಹವು ಲೇಪಾಕ್ಷಿ ನಂದಿ ಎಂದೇ ಜನಪ್ರಿಯವಾಗಿದ್ದು, ಸುಮಾರು ಆರು ಮೀಟರ್ ಎತ್ತರವಿದೆ.
ಬೇರುಗಳ ತೂಗುಸೇತುವೆ: ಮೇಘಾಲಯದ ಸುಮಾರು 70 ಗ್ರಾಮಗಳಲ್ಲಿ ಇರುವ, ಪ್ರಕೃತಿ ಸಹಜವಾಗಿ ಮೂಡಿರುವ ‘ಬೇರುಗಳ ತೂಗುಸೇತುವೆ’ಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು ಕುರಿತ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.