ADVERTISEMENT

ದೆಹಲಿ | ಶೂನ್ಯ ವಿದ್ಯುತ್ ಬಿಲ್‌ ಪಡೆಯುವವರ ಸಂಖ್ಯೆ 17 ಲಕ್ಷಕ್ಕಿಂತ ಕಡಿಮೆ: ವರದಿ

ಪಿಟಿಐ
Published 15 ಅಕ್ಟೋಬರ್ 2024, 4:29 IST
Last Updated 15 ಅಕ್ಟೋಬರ್ 2024, 4:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ದೆಹಲಿಯಲ್ಲಿ ಶೂನ್ಯ ವಿದ್ಯುತ್ ಬಿಲ್ ಪಡೆಯುವವರ ಸಂಖ್ಯೆ 17 ಲಕ್ಷಕ್ಕಿಂತ ಕಡಿಮೆ. ಒಟ್ಟು 59 ಲಕ್ಷ ದೇಶೀಯ ಗ್ರಾಹಕರಲ್ಲಿ ಶೇ 70ರಷ್ಟು ಜನ ₹ 500 ರಿಂದ ₹2000 ವರೆಗೆ ಮಾಸಿಕವಾಗಿ ವಿದ್ಯುತ್ ಬಿಲ್‌ ಪಾವತಿಸುತ್ತಾರೆ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ADVERTISEMENT

ದೆಹಲಿಯಲ್ಲಿ ಶೇ 70ಕ್ಕಿಂತ ಹೆಚ್ಚು ಜನ ವಿದ್ಯುತ್ ಬಿಲ್‌ ಪಾವತಿಸುತ್ತಾರೆ. ಅವರಲ್ಲಿ ಶೇ 40ರಷ್ಟು ಮಂದಿ ₹2000ಕ್ಕಿಂತ ಹೆಚ್ಚಿನ ಮೊತ್ತ ಪಾವತಿಸುತ್ತಾರೆ. ಶೇ 14ರಷ್ಟು ಜನ ₹1000-2000 ಹಾಗೂ ಶೇ 11ರಷ್ಟು ಜನ ₹500-1000 ಪಾವತಿಸುತ್ತಾರೆ. ಈ ವರ್ಷದ ಮೇ ತಿಂಗಳಲ್ಲಿ ಒಟ್ಟು 59,36,466 ಗ್ರಾಹಕರ ಪೈಕಿ 13,44,278 ಗ್ರಾಹಕರು ₹2,000ಕ್ಕಿಂತ ಹೆಚ್ಚಿನ ಬಿಲ್‌ ಪಾವತಿಸಿದ್ದಾರೆ ವಿದ್ಯುತ್ ಇಲಾಖೆಯ ಅಂಕಿ ಅಂಶಗಳು ಬಹಿರಂಗ ಪಡಿಸಿವೆ.

ದೆಹಲಿಯ ಒಟ್ಟು ದೇಶಿಯ ಗ್ರಾಹಕರಲ್ಲಿ, ಶೇ 28 ರಷ್ಟು ಮಂದಿ ವಿದ್ಯುತ್ ಬಳಕೆಗೆ ಹಣ ಪಾವತಿಸುವುದಿಲ್ಲ. ಜೂನ್‌ನಲ್ಲಿ ಶೂನ್ಯ ಬಿಲ್ ಪಡೆಯುವ ಗ್ರಾಹಕರ ಸಂಖ್ಯೆ 17 ಲಕ್ಷವಾಗಿದ್ದು, ಜುಲೈ ಮತ್ತು ಆಗಸ್ಟ್‌ನಲ್ಲಿ ಕ್ರಮವಾಗಿ 16.67 ಲಕ್ಷ ಮತ್ತು 16.72 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ತಿಂಗಳು 200 ಯೂನಿಟ್‌ ಉಚಿತ ವಿದ್ಯುತ್ ನೀಡುತ್ತಿರುವ ದೇಶದ ಮೊದಲ ರಾಜ್ಯ ಎಂದು ಆಡಳಿತಾರೂಢ ಎಎಪಿ ಪ್ರತಿಪಾದಿಸಿದೆ. ಆದರೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ದೆಹಲಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಲು ಬಿಜೆಪಿ ಯೋಜಿಸಿದೆ ಎಂದೂ ಆರೋಪಿಸಿದೆ.

ಇದಕ್ಕೆ ಪ್ರತಿಕ್ರಿಸಿದ ಬಿಜೆಪಿ, ಆಮ್‌ ಆದ್ಮಿ ಪಕ್ಷ ವಿದ್ಯುತ್‌ ಸಬ್ಸಿಡಿ ಹೆಸರಿನಲ್ಲಿ ದೆಹಲಿಯ ಜನರನ್ನು ದಾರಿ ತಪ್ಪಿಸುತ್ತಿದೆ. ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ಯೋಜನೆಯಿಂದ ಬಹಳ ಸಣ್ಣ ವರ್ಗದ ಜನ ಪ್ರಯೋಜನ ಪಡೆದಿದ್ದಾರೆ. ಆದರೆ ಹೆಚ್ಚಿನ ಶೇಕಡಾವಾರು ದೇಶೀಯ ಗ್ರಾಹಕರು ಮತ್ತು ಎಲ್ಲಾ ವಾಣಿಜ್ಯ ಗ್ರಾಹಕರು ಅತಿ ಹೆಚ್ಚು ವಿದ್ಯುತ್ ದರವನ್ನು ಪಾವತಿಸುತ್ತಿದ್ದಾರೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.