ಬೆಂಗಳೂರು: ಸಮ್ಮತಿಯ ಸಲಿಂಗಕಾಮಕ್ಕೆ ಸೆಕ್ಷನ್ 377 ಅನ್ವಯವಾಗುವುದಿಲ್ಲ, ಎಲ್‌ಜಿಬಿಟಿಕ್ಯು ಸಮುದಾಯ ಎಲ್ಲರಂತೆ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ದೇಶದಾದ್ಯಂತ ಎಲ್‌ಜಿಬಿಟಿಕ್ಯು ಸಮುದಾಯ ಸಂಭ್ರಮಾಚರಿಸುತ್ತಿದೆ.
ಇದು ಸಾಮಾಜಿಕ ತಾರತಮ್ಯದ ವಿರುದ್ಧ ಎಲ್‌ಜಿಬಿಟಿಕ್ಯು ಸಮುದಾಯವನ್ನು ಸಬಲಗೊಳಿಸುವ ಸಮಯ. ಸಾಮಾಜಿಕವಾಗಿ ಬೇರೂರಿರುವ ಪೂರ್ವಾಗ್ರಹಗಳಿಗೆ ಕೊನೆ ಹೇಳುವ ಸಮಯ ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಿದೆ. ಈ ಮಾತುಗಳು ಅವರಲ್ಲಿ ಭರವಸೆಯನ್ನು ಉಂಟು ಮಾಡಿದ್ದು, ಅನೇಕ ಕಡೆ ನೃತ್ಯ ಮಾಡಿ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಪುರಭವನದ ಎದುರು, ದೆಹಲಿ ಲಲಿತ್ ಹೋಟೆಲ್ ಒಳಗೆ, ಹೀಗೆ ಅನೇಕ ಕಡೆ ಎಲ್‌ಜಿಬಿಕ್ಯು ಕಾರ್ಯಕರ್ತರು ತಾಳಕ್ಕೆ ಹೆಚ್ಚೆ ಹಾಕಿದ್ದಾರೆ. ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
(ತೀರ್ಪಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಕೀಲ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಸಂಘಟನೆ ‘ಸಂಗಮ’ದ ಕಾನೂನು ಸಲಹೆಗಾರ ಬಿ.ಟಿ.ವೆಂಕಟೇಶ್ ಅವರ ಪ್ರತಿಕ್ರಿಯೆ– ವಿಡಿಯೊ)
(ಎಲ್‌ಜಿಬಿಟಿಕ್ಯು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ನಗರದ "ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್" ಮುಖ್ಯಸ್ಥೆ ಹಾಗೂ ವಕೀಲರಾದ ಜಯ್ನಾ ಕೊಠಾರಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ–ವಿಡಿಯೊ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.