ADVERTISEMENT

ತಮಿಳುನಾಡಿನಲ್ಲಿ ಭಾಷಾ ವಿವಾದದ ಕಿಡಿ ಹೊತ್ತಿಸಿದ LIC ವೆಬ್‌ಸೈಟ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2024, 11:34 IST
Last Updated 19 ನವೆಂಬರ್ 2024, 11:34 IST
<div class="paragraphs"><p>ಎಲ್‌ಐಸಿ ವೆಬ್‌ಸೈಟ್‌</p></div>

ಎಲ್‌ಐಸಿ ವೆಬ್‌ಸೈಟ್‌

   

ಚೆನ್ನೈ: ಭಾಷಾ ಹೇರಿಕೆ ವಿವಾದಕ್ಕೆ ‘ಭಾರತೀಯ ಜೀವ ವಿಮಾ ನಿಗಮ’(ಎಲ್ಐಸಿ) ಇದೀಗ ಹೊಸದಾಗಿ ಸೇರ್ಪಡೆಯಾಗಿದ್ದು, ಇಂಗ್ಲಿಷ್‌ ಬದಲು ಹಿಂದಿಯನ್ನು ವೆಬ್‌ಸೈಟ್‌ನ ಡಿಫಾಲ್ಟ್‌ ಭಾಷೆಯಾಗಿ ಬಳಸಿರುವುದಕ್ಕೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ನಿಂದ ಹಿಡಿದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿಯವರೆಗೆ ಬಹುತೇಕ ಎಲ್ಲಾ ರಾಜಕೀಯ ನಾಯಕರು ಈ ಕ್ರಮವನ್ನು ಖಂಡಿಸಿದ್ದು, ಹಿಂದೆ ಇರುವಂತೆ ಆಂಗ್ಲ ಭಾಷೆಯನ್ನೇ ವೆಬ್‌ಸೈಟ್‌ನ ಡಿಫಾಲ್ಟ್‌ ಭಾಷೆಯಾಗಿ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಹಿಂದಿಯನ್ನು ವೆಬ್‌ಸೈಟ್‌ನ ಡಿಫಾಲ್ಟ್‌ ಭಾಷೆಯಾಗಿ ಬದಲಾಯಿಸಿದ್ದು, ಇಂಗ್ಲಿಷ್‌ ಆಯ್ಕೆ ಮಾಡಿ ಎನ್ನುವುದೂ ಹಿಂದಿಯಲ್ಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಹಿಂದಿಯೇತರ ರಾಜ್ಯಗಳಿಗೆ ಸೇವೆ ನೀಡಲು ಎಲ್‌ಐಸಿಗೆ ಆಸಕ್ತಿಯಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್‌, ‘ಎಲ್‌ಐಸಿ ವೆಬ್‌ಸೈಟ್‌ ಹಿಂದಿ ಹೇರಿಕೆ ಪ್ರಚಾರದ ಸಾಧನವಾಗಿ ಮಾರ್ಪಟ್ಟಿದೆ. ಇಂಗ್ಲಿಷ್‌ ಅನ್ನು ಆಯ್ಕೆ ಮಾಡಿ ಎನ್ನುವುದನ್ನು ಹಿಂದಿಯಲ್ಲಿ ಬರೆಯಲಾಗಿದೆ. ಇದು ಬಲವಂತದ ಭಾಷಾ ಹೇರಿಕೆ ಹೊರತು ಬೇರೆನೂ ಅಲ್ಲ. ಇದು ಭಾರತದ ವೈವಿಧ್ಯತೆಗೆ ಧಕ್ಕೆ ತರುವಂತಿದೆ’ ಎಂದು ಕಿಡಿಕಾರಿದ್ದಾರೆ.

‘ಬಹುಪಾಲು ಕೊಡುಗೆ ನೀಡಿದವರಿಗೆ ದ್ರೋಹ ಮಾಡಲು ಎಲ್‌ಐಸಿಗೆ ಎಷ್ಟು ಧೈರ್ಯ? ಈ ಭಾಷಾ ದೌರ್ಜನ್ಯವನ್ನು ಹಿಂಪಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಹೇಳಿದ್ದಾರೆ.

‘ಬಿಜೆಪಿ ಸರ್ಕಾರವು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಹಿಂದಿ ಭಾಷೆಯನ್ನು ಹೇರಲು ಯತ್ನಿಸುತ್ತಿದೆ’ ಎಂದು ಪಳನಿಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.