ADVERTISEMENT

ಕೇರಳ: ಲಿಫ್ಟ್‌ನಲ್ಲಿ ತಲೆ ಸಿಕ್ಕಿಹಾಕಿಕೊಂಡು ವ್ಯಕ್ತಿ ಸಾವು

ಪಿಟಿಐ
Published 10 ಮೇ 2022, 16:04 IST
Last Updated 10 ಮೇ 2022, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಮಳಿಗೆಯೊಂದರ ಲಿಫ್ಟ್‌ನಲ್ಲಿತಲೆ ಸಿಕ್ಕಿಹಾಕಿಕೊಂಡು 54 ವರ್ಷದ ವ್ಯಕ್ತಿಯೊಬ್ಬರುಮೃತಪಟ್ಟ ಘಟನೆ ಕೇರಳದ ತಿರವನಂತಪುರಂನ ಅಂಬಲಮಕ್ಕು ಎಂಬಲ್ಲಿ ಮಂಗಳವಾರ ಸಂಭವಿಸಿದೆ.

ಅವಘಡ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದಾದರೂ ವ್ಯಕ್ತಿಯ ಪ್ರಾಣವನ್ನು ಕಾಪಾಡಲು ಸಾಧ್ಯವಾಗಿಲ್ಲ.

ಸತೀಶ್‌ ಎಂದು ಗುರುತಿಸಲಾದ ಮೃತ ವ್ಯಕ್ತಿಯು ಕಳೆದ 25 ವರ್ಷಗಳಿಂದ ಅದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಶವವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.