ADVERTISEMENT

ಅಯೋಧ್ಯೆಯ ರಸ್ತೆಗಳಲ್ಲಿ ಅಳವಡಿಸಿದ್ದ ₹50 ಲಕ್ಷ ಮೌಲ್ಯದ ದೀಪಗಳು ಕಳವು: FIR ದಾಖಲು

ಪಿಟಿಐ
Published 14 ಆಗಸ್ಟ್ 2024, 2:59 IST
Last Updated 14 ಆಗಸ್ಟ್ 2024, 2:59 IST
<div class="paragraphs"><p>ಅಯೋಧ್ಯೆಯ ರಸ್ತೆಗಳಲ್ಲಿ ಅಳವಡಿಸಿರುವ&nbsp;ದೀಪಗಳು (ಸಂಗ್ರಹ ಚಿತ್ರ)&nbsp;</p></div>

ಅಯೋಧ್ಯೆಯ ರಸ್ತೆಗಳಲ್ಲಿ ಅಳವಡಿಸಿರುವ ದೀಪಗಳು (ಸಂಗ್ರಹ ಚಿತ್ರ) 

   

ಪಿಟಿಐ ಚಿತ್ರ 

ಅಯೋಧ್ಯೆ: ಅಯೋಧ್ಯೆಯ ರಾಮಪಥ ಮತ್ತು ಭಕ್ತಿ ಪಥ ಮಾರ್ಗಗಳಲ್ಲಿ ಅಳವಡಿಸಿದ್ದ ಸುಮಾರು ₹50 ಲಕ್ಷ ಮೌಲ್ಯದ ದೀಪಗಳು ಕಳ್ಳತನವಾಗಿದೆ ಎಂದು ಪೊಲೀಸರುವ ತಿಳಿಸಿದ್ದಾರೆ.

ADVERTISEMENT

₹50 ಲಕ್ಷ ಮೌಲ್ಯದ 36 ಪ್ರೊಜೆಕ್ಟರ್ ಲೈಟ್‌ ಹಾಗೂ 3,800 ವಿವಿಧ ಪ್ರಕಾರದ ದೀಪಗಳನ್ನು ಕಳ್ಳತನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ದೀಪಗಳನ್ನು ಅಳವಡಿಸಲು ಒಪ್ಪಂದ ನೀಡಿದ್ದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೊಮೊಬೈಲ್ಸ್ ಸಂಸ್ಥೆಯ ಸದಸ್ಯರ ದೂರಿನಡಿ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಮಪಥ ಮಾರ್ಗದಲ್ಲಿ 6,400 ವಿವಿಧ ಪ್ರಕಾರದ ದೀಪಗಳು ಹಾಗೂ 96 ಪ್ರೊಜೆಕ್ಟರ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಮಾರ್ಚ್‌ 19ರವರೆಗೆ ಎಲ್ಲಾ ದೀಪಗಳು ಇದ್ದವು. ಆದರೆ ಮೇ 9ರಂದು ಪರಿಶೀಲನೆಗೆ ಸಂಸ್ಥೆ ತೆರಳಿದಾಗ ಕಾಣೆಯಾಗಿರುವುದು ತಿಳಿದು ಬಂದಿದೆ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ಭಾಗವಾಗಿ ಅಯೋಧ್ಯೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.