ADVERTISEMENT

ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್

ಪಿಟಿಐ
Published 11 ಏಪ್ರಿಲ್ 2024, 12:16 IST
Last Updated 11 ಏಪ್ರಿಲ್ 2024, 12:16 IST
<div class="paragraphs"><p>ಲಿಂಡಿ ಕ್ಯಾಮೆರಾನ್</p></div>

ಲಿಂಡಿ ಕ್ಯಾಮೆರಾನ್

   

(ಚಿತ್ರ ಕೃಪೆ– X/@Lindy_Cameron)

ನವದೆಹಲಿ: ಭಾರತದಲ್ಲಿನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್ ಅವರನ್ನು ಬ್ರಿಟನ್ ಸರ್ಕಾರ ನೇಮಿಸಿದೆ. ಹಿಂದೆ ಈ ಹುದ್ದೆಯಲ್ಲಿ ಅಲೆಕ್ಸ್ ಎಲ್ಲಿಸ್ ಅವರು ಇದ್ದರು.

ADVERTISEMENT

'ಲಿಂಡಿ ಕ್ಯಾಮೆರಾನ್ ಅವರನ್ನು ರಿಪಬ್ಲಿಕ್ ಆಫ್ ಇಂಡಿಯಾಗೆ ಬ್ರಿಟಿಷ್ ಹೈ ಕಮಿಷನರ್ ಆಗಿ ನೇಮಿಸಲಾಗಿದೆ. ಅಲೆಕ್ಸ್ ಎಲ್ಲಿಸ್ ಅವರು ಮತ್ತೊಂದು ರಾಜತಾಂತ್ರಿಕ ಸೇವಾ ನೇಮಕಾತಿಗೆ ವರ್ಗಾವಣೆಯಾಗಲಿದ್ದಾರೆ' ಎಂದು ಬ್ರಿಟಿಷ್ ರೀಡೌಟ್ ಗುರುವಾರ ತಿಳಿಸಿದೆ.

ಕ್ಯಾಮೆರಾನ್ ಅವರು, ಇದೇ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನವದೆಹಲಿಯಲ್ಲಿನ ಬ್ರಿಟನ್‌ ಹೈಕಮಿಷನ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಯಾಮೆರಾನ್ 2020ರಿಂದ ಯುಕೆ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಯುಕೆನ ಉತ್ತರ ಐರ್ಲೆಂಡ್ ಕಚೇರಿ ಮಹಾನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.