ವಿಶಾಖಪಟ್ಟಣ: ಹೃದಯಾಘಾತದಿಂದ 18 ವರ್ಷದ ಸಿಂಹವೊಂದು ಇಂದಿರಾಗಾಂಧಿ ಝೂಲಾಜಿಕಲ್ ಪಾರ್ಕ್‌ನಲ್ಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಹೇಶ್ವರಿ ಹೆಸರಿನ ಸಿಂಹವು ಹೃದಯಾಘಾತದಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಹಿರಿಯ ಪಶುವೈದ್ಯರ ಹೇಳಿಕೆ ಉಲ್ಲೇಖಿಸಿ ವರದಿಯಾಗಿದೆ.
2006ರಲ್ಲಿ ಜನಿಸಿದ್ದ ಮಹೇಶ್ವರಿ ಸಿಂಹವನ್ನು 2019ರಲ್ಲಿ ಗುಜರಾತ್‌ನ ಸಕ್ಕರ್‌ಬಾಗ್ ಝೂ ನಿಂದ ವಿಶಾಖಪಟ್ಟಣದಲ್ಲಿನ ಝೂಗೆ ಕರೆತರಲಾಗಿತ್ತು.
‘ಮಹೇಶ್ವರಿ ಸಿಂಹವು ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಯ ಅಧ್ಯಯನ ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಒದಗಿಸಿ ಲಕ್ಷಾಂತರ ಜನರ ಶಿಕ್ಷಣಕ್ಕೆ ಕೊಡುಗೆ ನೀಡಿದೆ. ಸಿಂಹಗಳು ಸಾಮಾನ್ಯವಾಗಿ 16 ರಿಂದ 18 ವರ್ಷದವರೆಗೆ ಮಾತ್ರ ಬದುಕುತ್ತವೆ. ಆದರೆ ಮಹೇಶ್ವರಿ ಸಿಂಹವು 19ನೇ ವಯಸ್ಸಿನಲ್ಲಿ ಮೃತಪಟ್ಟಿದೆ’ ಎಂದು ಇಂದಿರಾಗಾಂಧಿ ಝೂನ ಮೇಲ್ವಿಚಾರಕಿ ನಂದಿನಿ ಸಲಾರಿಯಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.