ADVERTISEMENT

ಗಿರ್ ಅರಣ್ಯದಲ್ಲಿ ರೈಲು ಡಿಕ್ಕಿ: ಸಿಂಹ ಸಾವು

ಪಿಟಿಐ
Published 22 ಆಗಸ್ಟ್ 2021, 6:44 IST
Last Updated 22 ಆಗಸ್ಟ್ 2021, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗಿರ್‌ ಅರಣ್ಯ ಪ್ರದೇಶದಲ್ಲಿ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದುದರಿಂದ ಗಂಡು ಸಿಂಹವೊಂದು ಮೃತಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.‌

ಗಿರ್ ಅರಣ್ಯ ವಿಭಾಗದ ಖಡ್ಕಲಾ ಗ್ರಾಮದಲ್ಲಿ ಶನಿವಾರ ರಾತ್ರಿ 9.30ರ ವೇಳೆಗೆ ಈ ದುರಂತ ಸಂಭವಿಸಿದೆ. ಸುಮಾರು 6 ವರ್ಷದ ಸಿಂಹದ ಕಳೇಬರ ಹಳಿಯಲ್ಲಿ ಪತ್ತೆಯಾಗಿದೆ.

2019–20ರಲ್ಲಿ ಗುಜರಾತ್‌ನಲ್ಲಿ 314 ಸಿಂಹಗಳು ಮೃತಪಟ್ಟಿವೆ, ಈ ಪೈಕಿ 23 ಸಿಂಹಗಳು ಅಸಹಜವಾಗಿ ಸಾವನ್ನಪ್ಪಿವೆ ಎಂದು ರಾಜ್ಯದ ಅರಣ್ಯ ಸಚಿವ ಗಣಪತ್ ವಾಸವ ಮಾರ್ಚ್‌ನಲ್ಲಿ ರಾಜ್ಯ ವಿಧಾನಸಭೆಗೆ ತಿಳಿಸಿದ್ದರು.

ADVERTISEMENT

ಗಿರ್ ಅಭಯಾರಣ್ಯವು ಏಷ್ಯಾಟಿಕ್‌ ಸಿಂಹಗಳ ಏಕೈಕ ವಾಸಸ್ಥಳವಾಗಿದ್ದು, ಸಿಂಹಗಳ ಅಸ್ವಾಭಾವಿಕ ಸಾವು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.