ADVERTISEMENT

ಜೋಡಿ ಸಿಂಹಕ್ಕೆ ‘ಸೀತಾ’, ‘ಅಕ್ಬರ್’ ಎಂದು ನಾಮಕರಣ: ಹೈಕೋರ್ಟ್‌ ಮೆಟ್ಟಿಲೇರಿದ VHP!

ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿರುವ ಹೆಣ್ಣು ಸಿಂಹಕ್ಕೆ ‘ಸೀತಾ’ ಎಂದು, ಗಂಡು ಸಿಂಹಕ್ಕೆ ‘ಅಕ್ಬರ್’ ಎಂದು ನಾಮಕರಣ ಮಾಡಿರುವುದು ವಿವಾದವಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2024, 11:24 IST
Last Updated 17 ಫೆಬ್ರುವರಿ 2024, 11:24 IST
<div class="paragraphs"><p>ಸಿಂಹಗಳು</p></div>

ಸಿಂಹಗಳು

   

ಸಾಂದರ್ಭಿಕ ಚಿತ್ರ

ಕೋಲ್ಕತ್ತ: ಇತ್ತೀಚೆಗೆ ತ್ರಿಪುರಾದ ಸೆಪಾಹಿಜಾಲಾ ಜೈವಿಕ ಪಾರ್ಕ್‌ನಿಂದ ಎರಡು ಸಿಂಹಗಳನ್ನು (ಒಂದು ಗಂಡು, ಒಂದು ಹೆಣ್ಣು) ಪಶ್ಚಿಮ ಬಂಗಾಳದ ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿದೆ.

ADVERTISEMENT

ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿರುವ ಹೆಣ್ಣು ಸಿಂಹಕ್ಕೆ ‘ಸೀತಾ’ ಎಂದು, ಗಂಡು ಸಿಂಹಕ್ಕೆ ‘ಅಕ್ಬರ್’ ಎಂದು ನಾಮಕರಣ ಮಾಡಲಾಗಿದೆ.

ಇದರಿಂದ ಕುಪಿತಗೊಂಡಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪಶ್ಚಿಮ ಬಂಗಾಳ ಘಟಕ, ‘ಹಿಂದೂಗಳಿಗೆ ಅವಮಾನ ಮಾಡಲು ಉದ್ದೇಶಪೂರ್ವಕವಾಗಿ ಹೀಗೆ ನಾಮಕರಣ ಮಾಡಿ ಎರಡೂ ಸಿಂಹಗಳನ್ನು ಪಾರ್ಕ್‌ನ ಒಂದೇ ಪ್ರದೇಶದಲ್ಲಿ ಇಟ್ಟಿದ್ದಾರೆ. ಇದನ್ನು ತಡೆಯಬೇಕು’ ಎಂದು ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯ ವಿರುದ್ಧ ಕೋಲ್ಕತ್ತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಇನ್ನೊಂದೆಡೆ ಈ ಎರಡೂ ಸಿಂಹಗಳಿಗೆ ಮೊದಲೇ ನಾಮಕರಣ ಆಗಿದೆ ಎಂದು ಅರಣ್ಯ ಇಲಾಖೆ ವಾದಿಸಿದೆ.

ಫೆಬ್ರುವರಿ 20ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ ಎಂದು Live Law ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.