ADVERTISEMENT

ಎರಡು ತಿಂಗಳ ನಂತರ ಕೇರಳದಲ್ಲಿ ಬಾಗಿಲು ತೆರೆದ ಮದ್ಯದಂಗಡಿ; ಆ್ಯಪ್‌ನಲ್ಲಿ ಇ-ಟೋಕನ್

ಪಿಟಿಐ
Published 28 ಮೇ 2020, 10:22 IST
Last Updated 28 ಮೇ 2020, 10:22 IST
ಕೋಯಿಕ್ಕೋಡ್ ಜಿಲ್ಲೆಯ ಮದ್ಯದಂಗಡಿಯೊಂದರ ಮುಂದೆ ನಿಂತಿರುವ ಜನ (ಪಿಟಿಐ ಚಿತ್ರ)
ಕೋಯಿಕ್ಕೋಡ್ ಜಿಲ್ಲೆಯ ಮದ್ಯದಂಗಡಿಯೊಂದರ ಮುಂದೆ ನಿಂತಿರುವ ಜನ (ಪಿಟಿಐ ಚಿತ್ರ)   

ತಿರುವನಂತಪುರಂ: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳ ನಂತರ ಕೇರಳದಲ್ಲಿ ಮದ್ಯದಂಗಡಿ ಗುರುವಾರ ತೆರೆದಿದೆ. BevQ ಎಂಬ ಮೊಬೈಲ್ ಆ್ಯಪ್‌ನ್ನು ಕೇರಳ ಸರ್ಕಾರ ಸಿದ್ಧಪಡಿಸಿದ್ದು, ಜನರ ಗುಂಪು ನಿಯಂತ್ರಣಕ್ಕಾಗಿ ಇದನ್ನು ಬಳಸಲಾಗಿದೆ.

ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿದಾಗ ಮಾರ್ಚ್ 24ರಿಂದಲೇ ರಾಜ್ಯ ಸರ್ಕಾರದ ಮದ್ಯದಂಗಡಿ, ಬಾರ್, ಬಿಯರ್ ಮತ್ತು ವೈನ್‌ ಶಾಪ್‌ಗಳು ಮುಚ್ಚಿದ್ದವು. ಮದ್ಯ ಖರೀದಿಸುವವರು ಆ್ಯಪ್ ಇನ್‌ಸ್ಟಾಲ್ ಮಾಡುವುದು ಕಡ್ಡಾವಾಗಿದೆ.ಹಾಗಾಗಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಆ್ಯಪ್ ಡೌನ್‍ಲೋಡ್ ಮಾಡುವ ಜನರ ಸಂಖ್ಯೆ ಧುತ್ತನೆ ಏರಿದ್ದು, ಕೆಲವರಿಗೆ ಬುಕಿಂಗ್ ಸಾಧ್ಯವಾಗಲಿಲ್ಲ ಎಂದು ಕೇರಳ ರಾಜ್ಯ ಮದ್ಯ ಕಾರ್ಪರೇಷನ್ ಲಿಮಿಟೆಡ್ (BEVCO) ವ್ಯವಸ್ಥಾಪಕ ನಿರ್ದೇಶಕ ಜಿ. ಸ್ಪ್ರಜನ್ ಕುಮಾರ್ ಹೇಳಿದ್ದಾರೆ.

ಬುಧವಾರ ಗೂಗಲ್ ಸ್ಟೋರ್‌ನಲ್ಲಿ ಪರಿಚಯಿಸಿದ ಈ ಆ್ಯಪ್‌ನ್ನು ಇಲ್ಲಿಯವರೆಗೆ 3.5 ಲಕ್ಷ ಕ್ಕಿಂತಲೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿದ್ದಾರೆ. ಕನಿಷ್ಠ 2.5 ಲಕ್ಷ ಇ-ಟೋಕನ್‌ಗಳನ್ನು ಇವತ್ತು ನೀಡಲಾಗಿದೆ. ಡೌನ್‌ಲೋಡ್ ಟ್ರಾಫಿಕ್ ಜಾಸ್ತಿ ಆದ ಕಾರಣ ಕೆಲವರಿಗೆ ಬುಕ್ಕಿಂಗ್ ವಿಳಂಬವಾಗಿದೆ ಎಂದು ಕುಮಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ADVERTISEMENT

ಹತ್ತಿರದ ಮದ್ಯದಂಗಡಿಯಿಂದ ಮದ್ಯ ಖರೀದಿಸಬೇಕಾದರೆ ಮೊಬೈಲ್ ಆ್ಯಪ್ ಮೂಲಕ ಇ-ಟೋಕನ್ ಪಡೆಯಬೇಕು. ಅದರಲ್ಲಿ ನೀಡಿರುವ ಸಮಯಕ್ಕೆ ಮದ್ಯದಂಗಡಿಗೆ ಹೋದರೆ ಸಾಕು. ಇದು ಜನರು ಗುಂಪುಗೂಡುವುದನ್ನು ತಡೆಯಲು ಸಹಕಾರಿಯಾಗಿದೆ ಎಂದು ರಾಜ್ಯ ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ಹೇಳಿದ್ದಾರೆ.

ರಾಜ್ಯ ಸರ್ಕಾರದ 301 ಮದ್ಯದಂಗಡಿ ಮತ್ತು 576 ಬಾರ್ ಹೋಟೆಲ್‌ಗಳು ಇಂದು ತೆರೆದಿದ್ದು ಯಾವುದೇ ಅಂಗಡಿ ಮುಂದೆ ಜನರು ಗುಂಪು ಸೇರಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.