ADVERTISEMENT

ವಿರೋಧ ಪಕ್ಷಗಳ ಪ್ರತಿಭಟನೆ: ಯಾವುದೇ ಚರ್ಚೆ ನಡೆಯದೆ ಲೋಕಸಭೆ ಕಲಾಪ ಮುಂದೂಡಿಕೆ

ಪಿಟಿಐ
Published 15 ಡಿಸೆಂಬರ್ 2023, 9:51 IST
Last Updated 15 ಡಿಸೆಂಬರ್ 2023, 9:51 IST
<div class="paragraphs"><p>ಸಂಸತ್ ಭವನದ ಹೊರಗೆ ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ</p></div>

ಸಂಸತ್ ಭವನದ ಹೊರಗೆ ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ

   

– ಪಿಟಿಐ ಚಿತ್ರ

ನವದೆಹಲಿ: ಸಂಸತ್ ಭದ್ರತಾ ಲೋಪ ಸಂಬಂಧ ಗೃಹ ಸಚಿವ ಅಮಿತ್‌ ಶಾ ಅವರು ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ, ಶುಕ್ರವಾರ ಲೋಕಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯದೆ ಕಲಾಪವನ್ನು ಮುಂದೂಡಲಾಯಿತು.

ADVERTISEMENT

ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆಯೇ, ವಿರೋಧ ಪಕ್ಷದ ಸದಸ್ಯರು ಪ್ಲೆಕಾರ್ಡ್ ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ಬಾವಿಗಿಳಿದು ಪ್ರತಿಭಟಿಸಿದರು. ಆರಂಭವಾಗಿ ಒಂದು ನಿಮಿಷ ಕಳೆಯುವುದಕ್ಕೂ ಮೊದಲೇ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಈ ವೇಳೆ ಸ್ಪೀಕರ್ ಪೀಠದಲ್ಲಿ ರಾಜೇಂದ್ರ ಅಗರವಾಲ್ ಇದ್ದರು.

2 ಗಂಟೆಗೆ ಮತ್ತೆ ಕಲಾಪ ಪುನಾರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಯಿತು. ಹೀಗಾಗಿ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಕೃತಿ ಸೋಲಂಕಿ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಿದರು.

ಭದ್ರತಾ ಲೋಪ ಸಂಬಂಧ ಗೃಹ ಸಚಿವ ಅಮಿತ್‌ ಶಾ ಉತ್ತರಿಸಬೇಕು, ಅವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು.

ಜತೆಗೆ, ಸಂಸತ್ ಭವನದ ಒಳಗೆ ಪ್ರವೇಶಿಸಿದ ಆರೋಪಿಗಳಿಗೆ ಪಾಸ್‌ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದೂ ವಿರೋಧ ಪಕ್ಷಗಳು ಆಗ್ರಹಿಸಿದವು.

ವಿರೋಧ ಪಕ್ಷಗಳ ಪ‍್ರತಿಭಟನೆಯಿಂದಾಗಿ ಸಾಮಾನ್ಯ ಕಡತಗಳ ಮಂಡನೆ ಹಾಗೂ ಸ್ಥಾಯಿ ಸಮಿತಿಯ ವರದಿಗಳನ್ನೂ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಅಪರಾಧ ಕಾನೂನು ಬದಲಿಸುವ ಮೂರು ಮಸೂದೆಗಳ ಮಂಡನೆ ಕೂಡ ಶುಕ್ರವಾರದ ವಿಷಯ ಪಟ್ಟಿಯಲ್ಲಿತ್ತು. ಅದನ್ನೂ ಪರಿಗಣಿಸಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.