ADVERTISEMENT

ಮಧ್ಯಪ್ರದೇಶದಲ್ಲಿ ಮಳೆ: ಮತದಾನದ ಮೇಲೆ ಪರಿಣಾಮ ಸಾಧ್ಯತೆ; ಚುನಾವಣಾ ಆಯೋಗ

ಪಿಟಿಐ
Published 13 ಮೇ 2024, 10:10 IST
Last Updated 13 ಮೇ 2024, 10:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಭೋಪಾಲ್( ಮಧ್ಯಪ್ರದೇಶ): ಮಧ್ಯಪ್ರದೇಶದ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಒಟ್ಟು ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಹೀಗಾಗಿ ಶೇಕಡವಾರು ಮತದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಚುನಾವಣಾಧಿಕಾರಿಯೊಬ್ಬರು ಸೋಮವಾರ ತಿಳಿಸಿದೆ.

ಚುನಾವಣಾ ಅಧಿಕಾರಿಗಳ ಪ್ರಕಾರ, ದೇವಾಸ್, ಉಜ್ಜಯಿನಿ, ಮಂಡ್‌ಸೋರ್, ರತ್ಲಾಮ್, ಧಾರ್, ಇಂದೋರ್, ಖಾರ್ಗೋನೆ ಮತ್ತು ಖಾಂಡ್ವಾ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ11 ರವರೆಗೆ ಸರಾಸರಿ ಶೇಕಡಾ 32.38 ರಷ್ಟು ಮತದಾನವಾಗಿದೆ.

ADVERTISEMENT

ಮೊದಲ ಮೂರು ಹಂತಗಳಲ್ಲಿ ಮತದಾನ ನಡೆದ 21 ಕ್ಷೇತ್ರಗಳಲ್ಲಿ ಶೇ.64.76ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಸಹ ಹೆಚ್ಚು ಮತದಾನವಾಗಲು ಪ್ರಯತ್ನಿಸಿದೆ ಎಂದು ಮಧ್ಯಪ್ರದೇಶ ಚುನಾವಣಾಧಿಕಾರಿ ಅನುಪಮ್ ರಾಜನ್ ಹೇಳಿದ್ದಾರೆ.

ಖಾರ್‌ಗೋನ್, ಖಾಂಡ್ವಾ, ಬರ್ವಾನಿ, ಅಲಿರಾಜ್‌ಪುರ, ಝಬುವಾ, ಧಾರ್, ಇಂದೋರ್, ರತ್ಲಾಮ್, ಉಜ್ಜಯಿನಿ, ದೇವಾಸ್, ಶಾಜಾಪುರ, ಮಂದಸೌರ್ ಮತ್ತು ನೀಮುಚ್‌ಗಳಲ್ಲಿ ಇಂದು (ಸೋಮವಾರ) ಮತ್ತು ನಾಳೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಭೋಪಾಲ್‌ನ ಹಿರಿಯ ಹವಾಮಾನಶಾಸ್ತ್ರಜ್ಞ ಅಭಿಜಿತ್ ಚಕ್ರೋಬರ್ತಿ ತಿಳಿಸಿದ್ದಾರೆ.

ಇಂದೋರ್ ಹೊರತುಪಡಿಸಿ ದೇವಾಸ್, ಉಜ್ಜಯಿನಿ, ರಾಲ್ಟಮ್, ಧಾರ್, ಖಾರ್‌ಗೋನ್, ಖಾಂಡ್ವಾ ಮತ್ತು ಮಂದಸೌರ್‌ನಲ್ಲಿ ಕಳೆದ 24 ಗಂಟೆಗಳ ಕಾಲ ಮಳೆಯಾಗಿದ್ದು, ಬೆಳಗ್ಗೆ 8.30 ಸುಮಾರಿಗೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾಂಡ್ವಾ, ಖಾರ್‌ಗೋನ , ಬರ್ವಾನಿ ಮತ್ತು ಬುರ್ಹಾನ್‌ಪುರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿರುವ ಕುರಿತು ವರದಿಯಾಗಿದೆ. ಮತದಾನಕ್ಕೆ ವಿದ್ಯುತ್ ಅಡಚಣೆಯಾಗಿರುವುದಾಗಿ ಈವರೆಗೂ ಮಾಹಿತಿ ಬಂದಿಲ್ಲ ಎಂದು ಚುನಾವಣಾಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.