ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಿದರು.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಆರಂಭವಾಗಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.
ಆಂಧ್ರಪ್ರದೇಶ (25) ಮತ್ತು ತೆಲಂಗಾಣದ (17) ಎಲ್ಲ ಕ್ಷೇತ್ರಗಳಲ್ಲದೆ ಉತ್ತರ ಪ್ರದೇಶದ 13, ಮಹಾರಾಷ್ಟ್ರದ 11, ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ತಲಾ ಎಂಟು, ಬಿಹಾರದ ಐದು, ಜಮ್ಮು ಮತ್ತು ಕಾಶ್ಮೀರದ ಒಂದು, ಒಡಿಶಾ ಮತ್ತು ಜಾರ್ಖಂಡ್‌ನ ತಲಾ ನಾಲ್ಕು ಕ್ಷೇತ್ರ ಗಳಲ್ಲಿ ಮತದಾನಕ್ಕೆ ವೇದಿಕೆ ಸಜ್ಜಾಗಿದೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನಟ ಅಲ್ಲು ಅರ್ಜುನ್ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.
ಎಲ್ಲರೂ ಮತ ಚಲಾಯಿಸಿ. ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಅದು. ಮುಂದಿನ ಐದು ವರ್ಷಕ್ಕೆ ಇದು ಪ್ರಮುಖ ದಿನ. ನಾನು ರಾಜಕೀಯವಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲಅಲ್ಲು ಅರ್ಜುನ್, ನಟ
ಆಂಧ್ರಪ್ರದೇಶದ 175 ಹಾಗೂ ಒಡಿಶಾದ 28 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಜನ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಆಂಧ್ರಪ್ರದೇಶದ ಹಲವು ಕಡೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮತದಾನದ ಮೇಲೆ ಪರಿಣಾಮ ಬೀರಬಹುದು.
4ನೇ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಪ್ರತಿ ಬೂತ್‌ನಲ್ಲಿ ಬಿಗಿ ಭಧ್ರತೆ ಕಲ್ಪಿಸಲಾಗಿದೆ. ಪುಲ್ವಾಮ, ಬುದ್ಗಾವ್‌ನಲ್ಲಿ ಮತದಾನ ನಡೆಯುತ್ತಿದ್ದು, ಭದ್ರತಾ ಪಡೆಗಳು ಬಿಗಿ ಬಂದೊಬಸ್ತ್ ಕಲ್ಪಿಸಿವೆ.
ಸಿನಿಮಾ ತಾರೆಯರು, ರಾಜಕೀಯ ನಾಯಕರು ಬೆಳಿಗ್ಗೆಯೇ ಮತ ಚಲಾಯಿಸಿದರು. ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್‌ನಲ್ಲಿ ನಟರಾದ ಜ್ಯೂ. ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ ಹಕ್ಕು ಚಲಾಯಿಸಿದರು.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಿಹಾರದ ಲಕಿಸರಾಯ್, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್‌ಮೋಹನ್ ರೆಡ್ಡಿ ಕಡಪದ ಜಯಮಹಲ್ ಅಂಗನವಾಡಿಯಲ್ಲಿ, ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಗುಂಟೂರು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಹೈದರಾಬಾದ್‌ನಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಲೋಕಸಭೆ ಚುನಾವಣೆಯ 4 ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತ ಪ್ರಮಾಣ ಏರಿಕೆಗೆ ಶಕ್ತಿ ತುಂಬಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ, ನಾವೆಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣನರೇಂದ್ರ ಮೋದಿ, ಪ್ರಧಾನಿ
ನಾವು ಗೆಲ್ಲುವುದದಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ನನಗೆ ವಿಶ್ವಾಸವಿದೆ. ಸುಮಾರು 4-5 ಸ್ಥಳಗಳಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ನಾನು ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಯಾರೂ ಇಲ್ಲಿಂದ ಟಿಎಂಸಿಯ ಯೂಸುಫ್ ಪಠಾಣ್ ಅವರನ್ನು ಆಯ್ಕೆ ಮಾಡಬಾರದು. ಅದು ನಿಷ್ಪ್ರಯೋಜಕವಾಗಿದೆ.ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಸಂಸದ ಹಾಗೂ ಬೆಹ್ರಾಂಪುರ ಅಭ್ಯರ್ಥಿ
ಅಮರಾವತಿ (ಆಂಧ್ರಪ್ರದೇಶ): ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರನ್ನು ಪತ್ತೆ ಹಚ್ಚಿ, ರಕ್ಷಿಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮುಖೇಶ್ ಕುಮಾರ್ ಮೀನಾ ಸೋಮವಾರ ತಿಳಿಸಿದ್ದಾರೆ .
ಶ್ರೀನಗರ: ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶ್ರೀನಗರದಲ್ಲಿ ಮತ ಚಲಾಯಿಸಿದರು.
ಚುನಾವಣೆಯಲ್ಲಿ ಹಿಂಸಾಚಾರವಿಲ್ಲ. ಎಲ್ಲವೂ ಸುಗಮವಾಗಿದೆ ಎಂದು ಅವರು ಹೇಳುವುದು ಬೇಸರದ ಸಂಗತಿ. ನಮ್ಮ ಪಕ್ಷದ ಕಾರ್ಯಕರ್ತರನ್ನು 2 ದಿನಗಳಿಂದ ಕೂಡಿ ಹಾಕಲಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವರನ್ನು ನಾನು ಕೇಳಲು ಬಯಸುತ್ತೇನೆ.. ನಮ್ಮ ಕಾರ್ಯಕರ್ತರನ್ನು ಏಕೆ ಕೂಡಿ ಹಾಕಲಾಗಿದೆ? ಸೋಲಿನ ಭಯವೇ?ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ
400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕನೌಜ್‌ನಿಂದ ಅಖಿಲೇಶ್ ಯಾದವ್, ಮೈನ್‌ಪುರಿಯಿಂದ ಡಿಂಪಲ್ ಯಾದವ್, ರಾಯ್‌ಬರೇಲಿ ಮತ್ತು ವಯನಾಡ್‌ನಲ್ಲಿ ರಾಹುಲ್ ಗಾಂಧಿ ಮತ್ತು ಹೈದರಾಬಾದ್‌ನಿಂದ ಓವೈಸಿ - ಇವರೆಲ್ಲರೂ ಚುನಾವಣೆಯಲ್ಲಿ ಸೋಲಲಿದ್ದಾರೆ.ಸಾಕ್ಷಿ ಮಹಾರಾಜ್, ಉನ್ನಾವ್ ಬಿಜೆಪಿ ಅಭ್ಯರ್ಥಿ
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು
ಒಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ
ಕೇಂದ್ರ ಸಚಿವ ಕಿಶನ್ ರೆಡ್ಡಿ
ಜಾರ್ಖಂಡ್ ಮುಖ್ಯಮಂತ್ರಿ ಚಾಂಪೈ ಸೊರೇನ್
ಕೇಂದ್ರ ಸಚಿವ ಅರ್ಜುನ್ ಮುಂಡಾ
ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್
ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ
ಶ್ರೀನಗರದಲ್ಲಿ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಜನರು
ಶ್ರೀನಗರದಲ್ಲಿ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಜನರು
ಶ್ರೀನಗರದಲ್ಲಿ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಜನರು
ಶ್ರೀನಗರದ ಮತಗಟ್ಟೆ ಬಳಿ ಭದ್ರತಾ ಪಡೆಗಳ ಕಾವಲು
ಆಂಧ್ರಪ್ರದೇಶದ ಪಾಲನಾಡು ಜಿಲ್ಲೆಯ ಕೆಲವೆಡೆ ಚುನಾವಣಾ ಸಂಬಂಧ ಹಿಂಸಾಚಾರ ನಡೆದಿದೆ.
ಹಿಂಸಾಚಾರದಲ್ಲಿ ಗಾಯಗೊಂಡಿರುವ ವ್ಯಕ್ತಿ
ಹಿಂಸಾಚಾರದಲ್ಲಿ ಗಾಯಗೊಂಡಿರುವ ವ್ಯಕ್ತಿ
ಆಂಧ್ರಪ್ರದೇಶ ಒಂಗೋಲ್‌ನ ದಾರ್ಸಿ ಲೋಕಸಭಾ ಕ್ಷೇತ್ರದ ಅವರವಲ್ಲಿಪಾಡು ಎಂಬಲ್ಲಿನ ಬೂತ್ ಸಂಖ್ಯೆ 145ರಲ್ಲಿ ಚುನಾವಣಾ ಸಂಬಂಧ ಮತ್ತೊಂದು ಹಿಂಸಾಚಾರ ನಡೆದಿದ್ದು ವರದಿಯಾಗಿದೆ.
ರಾಜ್ಯ / ಕೇಂದ್ರಾಡಳಿತ ಪ್ರದೇಶ | ಅಂದಾಜು ಮತದಾನ ಪ್ರಮಾಣ |
---|---|
ಮಹಾರಾಷ್ಟ್ರ | 6.45% |
ಒಡಿಶಾ | 9.23% |
ತೆಲಂಗಾಣ | 9.51% |
ಉತ್ತರ ಪ್ರದೇಶ | 11.67% |
ಪಶ್ಚಿಮ ಬಂಗಾಳ | 15.24% |
ಆಂಧ್ರ ಪ್ರದೇಶ | 9.05% |
ಬಿಹಾರ | 10.18% |
ಜಮ್ಮು ಮತ್ತು ಕಾಶ್ಮೀರ | 5.07% |
ಜಾರ್ಖಂಡ್ | 11.78% |
ಮಧ್ಯಪ್ರದೇಶ | 14.97 |
ಕೋಲ್ಕತ್ತ: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಪಶ್ವಿಮ ಬಂಗಾಳ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೈ.ಎಸ್ ಶರ್ಮಿಳಾ ಅವರು ಮತದಾನ ಮಾಡಿದರು.
ನನಗೆ ಇಲ್ಲಿ ನನ್ನ ಗೆಲುವು ಖಚಿತ. ಈ ಬಗ್ಗೆ ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಈ ಬಾರಿ ಸ್ಥಾನಗಳು ಹಾಗೂ ಶೇಕಡವಾರು ಮತಗಳಿಕೆ ಎರಡಂಕಿ ದಾಟಲಿದೆ.– ವೈ.ಎಸ್ ಶರ್ಮಿಳಾ, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮೆಹಬೂಬಾನಗರ ಲೋಕಸಭಾ ಕ್ಷೇತ್ರದ ಕೊಡಂಗಲ್‌ನ ಬೂತ್ ಒಂದರಲ್ಲಿ ಮತ ಚಲಾಯಿಸಿದರು.
ಕೆ.ಟಿ ರಾಮರಾವ್ ಅವರು ಹೈದರಾಬಾದ್‌ನಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ನಾವು ತುಂಬಾ ಆತ್ಮವಿಶ್ವಾಸ ಮತ್ತು ಭರವಸೆ ಹೊಂದಿದ್ದೇವೆ. 11 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. 10 ವರ್ಷಗಳ ಹಿಂದೆ ಭಾರತವನ್ನು ವಂಚಿಸಿದ ದೊಡ್ಡ ವ್ಯಕ್ತಿಯನ್ನು ಸಂಪೂರ್ಣವಾಗಿ ಹೊರಹಾಕಲಾಗುವುದು. ಜನರು ತಮ್ಮ ತಪ್ಪನ್ನು ಅರಿತುಕೊಂಡಿದ್ದಾರೆ. ಐದು ತಿಂಗಳ ಹಿಂದೆ ನಮಗೆ ಮೋಸ ಮಾಡಿದ ತೆಲಂಗಾಣದ ಸಣ್ಣ ಮನುಷ್ಯ ಕೂಡ ಹೊರಗೆ ಬೀಳಲಿದ್ದಾನೆ.– ಕೆ.ಟಿ ರಾಮರಾವ್, BRS ಶಾಸಕ
ಬಿಹಾರದ ಪಟ್ನಾದ ಗುರುದ್ವಾರ ಪಾಟ್ನಾ ಸಾಹಿಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಕ್ತರಿಗೆ ಆಹಾರ ಬಡಿಸಿದರು.
ರಾಜ್ಯ / ಕೇಂದ್ರಾಡಳಿತ ಪ್ರದೇಶ | ಅಂದಾಜು ಮತದಾನ ಪ್ರಮಾಣ |
---|---|
ಮಹಾರಾಷ್ಟ್ರ | 17.51% |
ಒಡಿಶಾ | 23.28% |
ತೆಲಂಗಾಣ | 24.31% |
ಉತ್ತರ ಪ್ರದೇಶ | 27.12% |
ಪಶ್ಚಿಮ ಬಂಗಾಳ | 32.78% |
ಆಂಧ್ರ ಪ್ರದೇಶ | 23.10% |
ಬಿಹಾರ | 22.54% |
ಜಮ್ಮು ಮತ್ತು ಕಾಶ್ಮೀರ | 14.94% |
ಜಾರ್ಖಂಡ್ | 27.40% |
ಮಧ್ಯಪ್ರದೇಶ | 32.38% |
ಹೈದರಾಬಾದ್: ತೆಲಂಗಾಣದ ಸಿದ್ದಪೇಟ್‌ನ ಚಿಂತಮಡಕದಲ್ಲಿ ಬಿ.ಆರ್. ಎಸ್ ಪಕ್ಷದ ಮುಖ್ಯಸ್ಥ ಕೆ.ಸಿ.ಆರ್ ಹಕ್ಕು ಚಲಾಯಿಸಿದರು.
ಬಿಜೆಪಿಯ ನಿಯಮದ ಪ್ರಕಾರ, 75 ವರ್ಷಗಳ ನಂತರ ಯಾರೂ ಯಾವುದೇ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಮೋದಿ ಅಧಿಕಾರದಿಂದ ಕೆಳಗಿಳಿಯಬೇಕು. ಹೀಗೆ ಆಗುವ ಸಾಧ್ಯತೆ ಇದೆ.ಕೆ. ಚಂದ್ರಶೇಖರ ರಾವ್, ಬಿ.ಆರ್.ಎಸ್ ಮುಖ್ಯಸ್ಥ
ಪಾಟ್ನಾ: ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಬಿಹಾರದ ಬೇಗುಸರಾಯ್‌ನಲ್ಲಿ ಮತದಾನ ಮಾಡಿದರು.
ವೈಎಸ್‌ಆರ್‌ಸಿಪಿ ಶಾಸಕ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯ ಅಭ್ಯರ್ಥಿಎ ಶಿವಕುಮಾರ್ ಗುಂಟೂರಿನ ತೆನಾಲಿಯಲ್ಲಿ ಮತದಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಸರತಿ ಸಾಲನ್ನು ತಪ್ಪಿಸಿ ಮುಂದೆ ಹೋಗಿದ್ದಕ್ಕೆ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಸಕರು ಮತದಾರನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.
ಹೈದರಾಬಾದ್: ತಮ್ಮ ಕಾರ್ಯಕರ್ತನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಇಲ್ಲಿನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮಂಗಳಹಟ್ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಅಲ್ಲಿ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೊವನ್ನು ಎಎನ್‌ಐ ಹಂಚಿಕೊಂಡಿದೆ.
ಮತದಾರರ ಗುರುತಿನ ಚೀಟಿಯನ್ನು ಅವರು ಪರಿಶೀಲನೆ ನಡೆಸುವ ವಿಡಿಯೊ ಕೂಡ ಸಾಮಾಜಿಕ ಜಾಲತಣದಲ್ಲಿ ಹರಿದಾಡುತ್ತಿದ್ದು, ವಿವಿಧ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯ / ಕೇಂದ್ರಾಡಳಿತ ಪ್ರದೇಶ | ಅಂದಾಜು ಮತದಾನ ಪ್ರಮಾಣ |
---|---|
ಮಹಾರಾಷ್ಟ್ರ | 30.85% |
ಒಡಿಶಾ | 39.30% |
ತೆಲಂಗಾಣ | 40.38% |
ಉತ್ತರ ಪ್ರದೇಶ | 39.68% |
ಪಶ್ಚಿಮ ಬಂಗಾಳ | 51.87% |
ಆಂಧ್ರ ಪ್ರದೇಶ | 40.26% |
ಬಿಹಾರ | 34.44% |
ಜಮ್ಮು ಮತ್ತು ಕಾಶ್ಮೀರ | 23.57% |
ಜಾರ್ಖಂಡ್ | 43.80% |
ಮಧ್ಯಪ್ರದೇಶ | 48.52% |
ಲೋಕಸಭಾ ಚುನಾವಣೆ 2024ರ 4ನೇ ಹಂತದ ಮತದಾನ ಸೋಮವಾರ ಸಂಜೆ 6ಕ್ಕೆ ಕೊನೆಗೊಂಡಿತು. 10 ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶ ಒಳಗೊಂಡು 96 ಕ್ಷೇತ್ರಗಳಿಗೆ ಮತದಾನ ನಡೆಯಿತು. ಸಂಜೆ 8ರವರೆಗಿನ ವರದಿಯಂತೆ ಶೇ 62.8ರಷ್ಟು ಮತದಾನವಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ 75.94ರಷ್ಟು ಮತದಾನವಾಗಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 36.58ರಷ್ಟು ಮತದಾನವಾಗಿದೆ. ಕಳೆದ ಕೆಲ ದಶಕಗಳಲ್ಲೇ ಇದು ಉತ್ತಮ ಮತದಾನ ಪ್ರಮಾಣ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಆಂಧ್ರಪ್ರದೇಶ– ಶೇ 68.12; ಬಿಹಾರ– ಶೇ 55.90; ಜಮ್ಮು ಮತ್ತು ಕಾಶ್ಮೀರ– ಶೇ 36.58; ಜಾರ್ಖಂಡ್– ಶೇ 63.63; ಮಧ್ಯಪ್ರದೇಶ– ಶೇ 68.63; ಮಹಾರಾಷ್ಟ್ರ– ಶೇ 52.75; ಒಡಿಶಾ– ಶೇ 63.85 ; ತೆಲಂಗಾಣ– ಶೇ 61.39; ಉತ್ತರ ಪ್ರದೇಶ– ಶೇ 57.88; ಪಶ್ಚಿಮ ಬಂಗಾಳದಲ್ಲಿ ಶೇ 75.94ರಷ್ಟು ಮತದಾನವಾಗಿದೆ. 4ನೇ ಹಂತದ ಒಟ್ಟಾರೆ ಮತದಾನ ಪ್ರಮಾಣ ಶೇ 62.8 ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.