ADVERTISEMENT

Lok Sabha Elections 2024 | ಅಂತಿಮ ಹಂತದ ಮತದಾನ ಮುಕ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2024, 16:40 IST
Last Updated 1 ಜೂನ್ 2024, 16:40 IST
<div class="paragraphs"><p>ಇಂಡಿಯಾ ಮೈತ್ರಿಕೂಟ ನಾಯಕರ ಸಭೆ</p></div>

ಇಂಡಿಯಾ ಮೈತ್ರಿಕೂಟ ನಾಯಕರ ಸಭೆ

   

ಚಿತ್ರ: X / @kharge

ಹಿಮಾಚಲ ‍ಪ್ರದೇಶದಲ್ಲಿ ಜೆ.‍ಪಿ ನಡ್ಡಾ ಮತದಾನ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಹಿಮಾಚಲ ‍ಪ್ರದೇಶದ ಬಿಲಾಸಪುರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದರು.

ಎಎಪಿ ಸಂಸದ ರಾಘವ ಚಡ್ಡಾ ಮತದಾನ

ಎಎಪಿ ಸಂಸದ ರಾಘವ ಚಡ್ಡಾ ಅವರು ಪ‍ಂಜಾಬ್‌ನ ಲಖನ್‌ಪುರದ ಸಾಹಿಬ್‌ಝಾದ ಅಜಿತ್‌ ಸಿಂಗ್‌ ನಾಗುರ್‌ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಎಎಪಿ ಸಂಸದ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್‌ ಮತದಾನ

ಪಂಜಾಬ್‌ನ ಜಲಂಧರ್‌ನಲ್ಲಿ ಎಎಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್ ಅವರು ಮತದಾನ ಮಾಡಿದರು.

ಗೋರಖಪುರದಲ್ಲಿ ಉತ್ತರ ‍ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾನ

ಉತ್ತರ ಪ್ರದೇಶದ ಗೋರಖ‍‍ಪುರದ ಗೋರಖನಾಥ ಮತಗಟ್ಟೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾನ ಮಾಡಿದರು.

ಪ್ರಧಾನಿ ಮೋದಿ ಅವರು ತಮ್ಮ 2.5 ತಿಂಗಳ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಅವರ ಇಡೀ ಜೀವನವು ಭಾರತಕ್ಕೆ ಮುಡಿಪಾಗಿದೆ. ಅವರು 10 ವರ್ಷಗಳ ಕಾಲ ದೇಶದ ಸೇವೆ ಸಲ್ಲಿಸಿದ್ದಾರೆ. ವಿಶ್ವದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ.
– ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ

ಇಂದು 7ನೇ ಹಾಗೂ ಕೊನೆಯ ಹಂತದ ಮತದಾನ

ಪಂಜಾಬ್‌ನ ಎಲ್ಲ 13 ಮತ್ತು ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಡಿಶಾದ ಆರು ಲೋಕಸಭಾ ಕ್ಷೇತ್ರಗಳಲ್ಲದೆ, 147 ವಿಧಾನಸಭಾ ಕ್ಷೇತ್ರಗಳ ಪೈಕಿ ಇನ್ನುಳಿದ 42 ಸ್ಥಾನಗಳಿಗೂ ಏಕಕಾಲಕ್ಕೆ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೂ ವೇದಿಕೆ ಸಜ್ಜಾಗಿದೆ.

ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ ನಡೆಯಲಿದ್ದು, 57 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಣದಲ್ಲಿರುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲೂ ಇಂದು ಮತದಾನ ನಡೆಯಲಿದೆ.

ಮತದಾನ ಮಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್

ಚರಂಡಿಯಲ್ಲಿ ಇವಿಎಂ, ವಿವಿಪ್ಯಾಟ್!

ಇಂದು ಬೆಳಿಗ್ಗೆ 6.40 ಗಂಟೆಗೆ ಬೇನಿಮಾಧವಪುರ ಎಫ್‌ಪಿ ಶಾಲೆಯ ಬಳಿ ಸೆಕ್ಟರ್ ಆಫೀಸರ್‌ನ ಮೀಸಲು ಇವಿಎಂಗಳು ಮತ್ತು ಪೇಪರ್‌ಗಳನ್ನು, ಸ್ಥಳೀಯ ಜನರು ಲೂಟಿ ಮಾಡಿದ್ದಾರೆ. 2 VVPAT ಯಂತ್ರಗಳನ್ನು ಚರಂಡಿಗೆ ಎಸೆಯಲಾಗಿದೆ. ಸೆಕ್ಟರ್ ಅಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ. ಸೆಕ್ಟರ್‌ನ ಎಲ್ಲಾ ಆರು ಬೂತ್‌ಗಳಲ್ಲಿ ಹೊಸ ಇವಿಎಂ ಮತ್ತು ಪೇಪರ್‌ಗಳನ್ನು ಅಧಿಕಾರಿಗೆ ಒದಗಿಸಲಾಗಿದೆ
– ಪಶ್ಚಿಮ ಬಂಗಾಳ ಚುನಾವಣಾ ಆಯೋಗ

ಚಿತ್ರಗಳಲ್ಲಿ ನೋಡಿ: ಮತದಾನ ಮಾಡಿದ ನಾಯಕರು

ನಮ್ಮ ಹೋರಾಟ ಅಂತಿಮ ಹಂತದಲ್ಲಿದೆ: ಖರ್ಗೆ

ನನ್ನ ಪ್ರೀತಿಯ ದೇಶವಾಸಿಗಳೇ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಇಂದು ಕೊನೆಯ ಹಂತದ ಮತದಾನವಾಗಿದೆ. ಇಂಡಿಯಾ ಕೂಟ ತನ್ನೆಲ್ಲ ಶಕ್ತಿಯಿಂದ ಸರ್ವಾಧಿಕಾರಿ ಶಕ್ತಿಗಳನ್ನು ಎದುರಿಸುತ್ತಿದೆ. ಹೋರಾಟವು ಅಂತಿಮ ಹಂತದಲ್ಲಿದೆ. ಆರು ಹಂತಗಳ ಚುನಾವಣೆಯಲ್ಲಿ ಜನ ನಮಗೆ ಬೆಂಬಲ ನೀಡಿದ್ದಾರೆ. ಹಾಗೇ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಜಾರಿಗೊಳಿಸುವುದನ್ನು ಎದುರು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಧಾನಿ ಮೋದಿಯವರಿಗೆ ಜನ ಆಶೀರ್ವಾದ ಮಾಡಲಿದ್ದಾರೆ. ಎನ್‌ಡಿಎ 400 ಸೀಟು ದಾಟಲಿದೆ. ಇಡೀ ದೇಶವೇ 400 ಗಡಿ ದಾಟುವ ಬಗ್ಗೆ ಚರ್ಚೆ ನಡೆಸುತ್ತಿದೆ. ಆದರೆ ಋಣಾತ್ಮಕ ರಾಜಕೀಯ ಮಾಡಿದವರು ಸಂವಿಧಾನ ಬದಲಾವಣೆಗೆ 400 ಸೀಟು ಬೇಕು ಎನ್ನುತ್ತಿದ್ದಾರೆ. ಅವರು ಕಳೆದ 75 ವರ್ಷಗಳಿಂದ ಒಡೆದು ಆಳುವ ತತ್ವದ ಮೇಲೆ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಸಕಾರಾತ್ಮಕ ರಾಜಕೀಯದಿಂದ ವಿಕಸನಗೊಂಡ ಭಾರತವನ್ನು ಮುನ್ನಡೆಸುವ ಕೆಲಸವನ್ನು ಮಾಡಿದ್ದಾರೆ.
– ಜೆ.ಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮತದಾನ

ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಅವರ ಪತ್ನಿ ಡಾ ಗುರುಪ್ರೀತ್ ಕೌರ್ ಸಂಗ್ರೂರ್ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕುಟುಂಬ ಸಮೇತ ಬಂದು ಲಾಲೂ ಪ್ರಸಾದ್ ಮತದಾನ

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಅವರು ತಮ್ಮಪತ್ನಿ ರಾಬ್ಡಿ ದೇವಿ, ಪುತ್ರಿ ರೋಹಿಣಿ ಅಚಾರ್ಯ ಅವರ ಜೊತೆಎ ಬಂದು ಮತ ಚಲಾಯಿಸಿದರು.

ಮತ ಚಲಾಯಿಸಲು ಜನರ ಉತ್ಸಾಹ

ವಾರಾಣಸಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ದೇಗುಲ ಭೇಟಿ

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಅಜಯ್ ರಾವ್‌ ಅವರು ಮತ ಚಲಾಯಿಸುವುದಕ್ಕೂ ಮುನ್ನ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬದಲ್ಲಿ ಎಲ್ಲಾ ಮತದಾರರು ಉತ್ಸಾಹದಿಂದ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ. ಯುವ ಮತ್ತು ಮಹಿಳಾ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವೆಲ್ಲರೂ ಒಟ್ಟಾಗಿ ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಯುತಗೊಳಿಸೋಣ.
- ನರೇಂದ್ರ ಮೋದಿ, ಪ್ರಧಾನಿ

ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 40.09ರಷ್ಟು ಮತದಾನ

ಲೋಕಸಭಾ ಚುನಾವಣೆಯ 7ನೇ ಹಂತದಲ್ಲಿ 57 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮಧ್ಯಾಹ್ನ1ಗಂಟೆ ವೇಳೆಗೆ ಶೇ 40.09ರಷ್ಟು ಮತದಾನವಾಗಿದೆ.

ರಾಜ್ಯ / ಕೇಂದ್ರಾಡಳಿತ ಪ್ರದೇಶಮತದಾನ ಪ್ರಮಾಣ (%)
ಉತ್ತರ ಪ್ರದೇಶ39.31
ಪಶ್ಚಿಮ ಬಂಗಾಳ47.07
ಬಿಹಾರ35.65
ಚಂಡೀಗಢ40.1
ಹಿಮಾಚಲ ಪ್ರದೇಶ48.63
ಜಾರ್ಖಂಡ್‌46.8
ಒಡಿಶಾ37.8
ಪಂಜಾಬ್‌37.8

ಮತ ಚಲಾಯಿಸಿದ ಬಾಲಿವುಡ್ ನಟ ಆಯುಷ್ಮಾನ್ ಖುರಾನ

11 ಗಂಟೆ ವೇಳೆಗೆ ಶೇ 26.3 ರಷ್ಟು ಮತದಾನ

ಲೋಕಸಭಾ ಚುನಾವಣೆಯ 7ನೇ ಹಂತದಲ್ಲಿ 57 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 26.3ರಷ್ಟು ಮತದಾನವಾಗಿದೆ.

ರಾಜ್ಯ / ಕೇಂದ್ರಾಡಳಿತ ಪ್ರದೇಶಮತದಾನ ಪ್ರಮಾಣ (%)
ಉತ್ತರ ಪ್ರದೇಶ28.02
ಪಶ್ಚಿಮ ಬಂಗಾಳ28.1
ಬಿಹಾರ24.25
ಚಂಡೀಗಢ25.03
ಹಿಮಾಚಲ ಪ್ರದೇಶ31.93
ಜಾರ್ಖಂಡ್‌29.55
ಒಡಿಶಾ22.64
ಪಂಜಾಬ್‌23.91

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತದಾನ

ಹಿಮಾಚಲದ ಜನತೆಗೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ಕಳೆದ 14 ತಿಂಗಳುಗಳಲ್ಲಿ ನಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳು ನಡೆದಿವೆ. ಬಿಜೆಪಿ ರಚನೆಗೆ ಪ್ರಯತ್ನಿಸಿದೆ. ಸರ್ಕಾರ ಕೆಡವಲು ಹಣಬಲವನ್ನು ಬಳಸುತ್ತಿದೆ. ನಮ್ಮ ಸರ್ಕಾರ ಮುಂದಿನ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆ.
– ಸುಖ್ವಿಂದರ್ ಸಿಂಗ್ ಸುಖು, ಹಿಮಾಚಲ ಪ್ರದೇಶ ಮುಖ್ಯಮಂತ್ರಿ

ಏಳನೇ ಹಂತದ ಮತದಾನ: ಬೆಳಿಗ್ಗೆ 9 ಗಂಟೆಗೆ ಶೇ 11.31 ರಷ್ಟು ಮತದಾನ

2024ರ ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಜಾರಿಯಲ್ಲಿದ್ದು, ಬೆಳಿಗ್ಗೆ 9 ಗಂಟೆ ವೇಳೆಗೆ ಶೇ 11.31ರಷ್ಟು ಮತದಾನವಾಗಿದೆ. ರಾಜ್ಯವಾರು ಮತದಾನ ಹೀಗಿದೆ

ರಾಜ್ಯ / ಕೇಂದ್ರಾಡಳಿತ ಪ್ರದೇಶಮತದಾನ ಪ್ರಮಾಣ (%)
ಉತ್ತರ ಪ್ರದೇಶ12.94
ಪಶ್ಚಿಮ ಬಂಗಾಳ12.63
ಬಿಹಾರ10.58
ಚಂಡೀಗಢ11.64
ಹಿಮಾಚಲ ಪ್ರದೇಶ14.35
ಜಾರ್ಖಂಡ್‌12.15
ಒಡಿಶಾ7.69
ಪಂಜಾಬ್‌9.64

ಜನರು ಬದಲಾವಣೆ ಬಯಸುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎನಿಸುತ್ತಿದೆ ಎಂದು ಕೇರಳ ಕಾಂಗ್ರೆಸ್‌ ನಾಯಕ ರಮೇಶ್‌ ಚೆನ್ನಿತಲ ಹೇಳಿದ್ದಾರೆ.

ಖರ್ಗೆ ನಿವಾಸಕ್ಕೆ ಕೇಜ್ರಿವಾಲ್, ತೇಜಸ್ವಿ

ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಯಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದ್ದಾರೆ.

ದೆಹಲಿಯಲ್ಲಿರುವ ಖರ್ಗೆ ಅವರ ನಿವಾಸದಲ್ಲಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ಸಭೆ ಇಂದು ಸಂಜೆ ನಡೆಯಲಿದೆ.

ಲೋಕಸಭಾ ಚುನಾವಣೆಗೆ ಇಂದು ಅಂತಿಮ ಹಂತದ ಮುತದಾನ ಮುಕ್ತಾಯವಾಗಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೂ ಮೊದಲು ಮೈತ್ರಿಕೂಟದ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ಸಭೆ ಆಯೋಜಿಸಲಾಗಿದೆ.

ಇಂಡಿಯಾ ಸಭೆಗೆ ಮುಫ್ತಿ ಗೈರು

ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಇಂಡಿಯಾ ಮೈತ್ರಿಕೂಟದ ಸಭೆಗೆ ಗೌರಾಗಲಿದ್ದಾರೆ. ವೈಯಕ್ತಿಕ ಕಾರಣದಿಂದ ಸಭೆಗೆ ಹಾಜರಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೂ ಸಭೆಗೆ ಹಾಜರಾಗುತ್ತಿಲ್ಲ.

'ಮಂಡಿ' ಕ್ಷೇತ್ರದ ಬಗ್ಗೆ ಕಂಗನಾಗೆ ಏನೂ ಗೊತ್ತಿಲ್ಲ: ಸಿಂಗ್

ಜನರ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ನಾನು ಚುನಾವಣೆಯಲ್ಲಿ ಕಣಕ್ಕಿಳಿದಿದ್ದೇನೆ. ಆದರೆ, ಕಂಗನಾ ರನೌತ್‌ ಅವರಿಗೆ ಮಂಡಿಯಲ್ಲಿರುವ ಸಮಸ್ಯೆಗಳ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಭೆ ಆರಂಭ

ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಸಭೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಆರಂಭವಾಗಿದೆ.

ಈ ಬಗ್ಗೆ ಟ್ವಿಟರ್‌/ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಖರ್ಗೆ, ಲೋಕಸಭಾ ಚುನಾವಣೆ ಫಲಿತಾಂಶ ಜೂನ್‌ 4ರಂದು ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಮೈತ್ರಿಕೂಟದ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು, 'ಹೋರಾಟ ಇನ್ನೂ ಮುಕ್ತಾಯವಾಗಿಲ್ಲ. ಎಲ್ಲ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಅತ್ಯಂತ ಎಚ್ಚರದಿಂದ ಇರಬೇಕು. ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಸಂಪೂರ್ಣ ಶಕ್ತಿ ಮತ್ತು ವಿಶ್ವಾಸದಿಂದ, ಧನಾತ್ಮಕ ಫಲಿತಾಂಶಕ್ಕಾಗಿ ಹೋರಾಡಿದ್ದೇವೆ. ಜನರೂ ನಮ್ಮನ್ನು ಬೆಂಬಲಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಮಧ್ಯಾಹ್ನ 3ರ ಹೊತ್ತಿಗೆ ಶೇ 49.68 ಮತದಾನ

ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಧ್ಯಾಹ್ನ 3ರ ಹೊತ್ತಿಗೆ ಸರಾಸರಿ ಶೇ 49.68 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಾರ್ಖಂಡ್‌ನಲ್ಲಿ ದಾಖಲೆಯ ಶೇ 60.14 ರಷ್ಟು ಮತದಾನವಾಗಿದೆ. ಉಳಿದಂತೆ ಒಡಿಶಾದಲ್ಲಿ ಶೇ 49.77, ಪಂಜಾಬ್‌ನಲ್ಲಿ ಶೇ 46.38, ಉತ್ತರ ಪ್ರದೇಶದಲ್ಲಿ ಶೇ 46.83, ಪಶ್ಚಿಮ ಬಂಗಾಳದಲ್ಲಿ ಶೇ 58.46, ಬಿಹಾರದಲ್ಲಿ ಶೇ 42.95, ಹಿಮಾಚಲ ಪ್ರದೇಶದಲ್ಲಿ ಶೇ 58.41 ಮತ್ತು ಚಂಡೀಗಢದಲ್ಲಿ ಶೇ 52.61 ಮತದಾನವಾಗಿದೆ.

ಚರ್ಚೆಯಲ್ಲಿ ಪಾಲ್ಗೊಳ್ಳಲು ಇಂಡಿಯಾ ನಿರ್ಧಾರ

ಟಿಆರ್‌ಪಿಗಾಗಿ ಟಿ.ವಿ. ಚಾನಲ್‌ಗಳಲ್ಲಿ ಪ್ರಸಾರವಾಗುವ ಊಹಾಪೋಹ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ ಒಂದು ದಿನದ ಒಳಗಾಗಿ ಕಾಂಗ್ರೆಸ್ ತನ್ನ ನಿರ್ಧಾರವನ್ನು ಬದಲಿಸಿದೆ. ಇಂದು ಸಂಜೆ 6.30ರಿಂದ ಪ್ರಸಾರವಾಗುವ ಚುನಾವಣೋತ್ತರ ಸಮೀಕ್ಷೆ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದೆ.

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ಶನಿವಾರ ಸಭೆ ನಡೆಸಿದ ನಂತರ, ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಖೇರಾ ಈ ನಿರ್ಧಾರ ಪ್ರಕಟಿಸಿದ್ದಾರೆ.

ಸಂಜೆ 5ರ ಹೊತ್ತಿಗೆ ಶೇ 58 ರಷ್ಟು ಮತದಾನ 

ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಿಗೆ ಸಂಜೆ 5ರ ಹೊತ್ತಿಗೆ ಸರಾಸರಿ ಶೇ 58.34 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಶೇ  67.95 ರಷ್ಟು ಮತದಾನವಾಗಿದೆ. ಉಳಿದಂತೆ ಒಡಿಶಾದಲ್ಲಿ ಶೇ 62.46, ಪಂಜಾಬ್‌ನಲ್ಲಿ ಶೇ 55.20, ಉತ್ತರ ಪ್ರದೇಶದಲ್ಲಿ ಶೇ 54, ಪಶ್ಚಿಮ ಬಂಗಾಳದಲ್ಲಿ ಶೇ 69.89, ಬಿಹಾರದಲ್ಲಿ ಶೇ 48.86, ಹಿಮಾಚಲ ಪ್ರದೇಶದಲ್ಲಿ ಶೇ 66.56 ಮತ್ತು ಚಂಡೀಗಢದಲ್ಲಿ ಶೇ 62.80 ಮತದಾನವಾಗಿದೆ.

ಜಾರ್ಖಂಡ್‌ನ 400 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ 400 ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ಕಲ್ಲಿದ್ದಲು ಸಂಗ್ರಹ ಘಟಕ ಸ್ಥಾಪನೆ ವಿರೋಧಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ.

7ನೇ ಹಂತದ ಮತದಾನ ಮುಕ್ತಾಯ

ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಿಗೆ ನಡೆದ 7ನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಎಲ್ಲ ಹಂತದ ಮತದಾನವೂ ಕೊನೆಗೊಂಡಿದೆ.

ಕಡೆಯ ಹಂತದಲ್ಲಿ ಅರ್ಹ ಮತದಾರರ ಪೈಕಿ ಶೇಕಡ 59.15ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಆ್ಯಪ್‌ನಲ್ಲಿ ರಾತ್ರಿ 8 ಗಂಟೆಗೆ ಇದ್ದ ಮಾಹಿತಿ ಪ್ರಕಾರ ಇಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.