ADVERTISEMENT

ಲೋಕಸಭಾ ಚುನಾವಣೆ: ಕುಟುಂಬ ರಾಜಕೀಯ ಮತ್ತು ಅಭಿವೃದ್ಧಿ ನಡುವಿನ ಹೋರಾಟ– ನಡ್ಡಾ

ಪಿಟಿಐ
Published 22 ಫೆಬ್ರುವರಿ 2024, 3:20 IST
Last Updated 22 ಫೆಬ್ರುವರಿ 2024, 3:20 IST
<div class="paragraphs"><p>ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮಾತನಾಡುತ್ತಿರುವುದು ಐಎಎನ್‌ಎಸ್‌/ಟ್ವಿಟರ್ ಚಿತ್ರ</p></div>

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮಾತನಾಡುತ್ತಿರುವುದು ಐಎಎನ್‌ಎಸ್‌/ಟ್ವಿಟರ್ ಚಿತ್ರ

   

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯು ಒಂದು ಕಡೆ ಕುಟುಂಬ (ವಂಶಪಾರಂಪರ್ಯ)ರಾಜಕಾರಣ, ಭ್ರಷ್ಟಾಚಾರ ಹಾಗೂ ಮತ್ತೊಂದು ಕಡೆ ಅಭಿವೃದ್ಧಿ ನಡುವಿನ ಹೋರಾಟವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಇಲ್ಲಿನ ಪಶ್ಚಿಮ ಉಪನಗರಗಳ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಈಗ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಹೇಳಿದರು.

ADVERTISEMENT

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವು ಕುಟುಂಬ ರಾಜಕಾರಣದಲ್ಲಿ ತೊಡಗಿದ್ದು ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಆರೋಪಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಮತದಾರರು ಅಭಿವೃದ್ಧಿಯನ್ನು ಮಾತ್ರ ನೋಡಿದ್ದಾರೆ ಮತ್ತು ಹಿಂದಿನ ಸರ್ಕಾರಗಳಂತೆ ಭ್ರಷ್ಟಾಚಾರವನ್ನು ಕಂಡಿಲ್ಲ ಎಂದರು. 

ನೀವು ಮತದಾರರ ಮನೆ ಬಾಗಿಲುಗಳಿಗೆ ತೆರಳಿ ಅಭಿವೃದ್ಧಿ ಕೆಲಸಗಳ ಬಗ್ಗೆ ಅವರಿಗೆ ಹೇಳಬೇಕು. ಹಾಗೂ ಹೊಸ ಜನಾದೇಶಕ್ಕಾಗಿ ಅವರ ಬೆಂಬಲವನ್ನು ಪಡೆಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.