ನವದೆಹಲಿ:ರಾಜ್ಯ ಕಾಂಗ್ರೆಸ್-ಜಾತ್ಯತೀತ ಜನತಾದಳ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯಿಂದ ನಡೆಯಿತೆನ್ನಲಾದ ಶಾಸಕರ ಖರೀದಿ ಪ್ರಕರಣ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.
ಲೋಕಸಭೆಯಲ್ಲಿಸೋನಿಯಾ ಗಾಂಧಿ,ಮಲ್ಲಿಕಾರ್ಜುನ ಖರ್ಗೆ ಸೇರಿದಂತೆಕಾಂಗ್ರೆಸ್ ಸಂಸದರು ಸಭಾತ್ಯಾಗ ನಡೆಸಿ ಪ್ರತಿಭಟನೆ ದಾಖಲಿಸಿದರು.
ಲೋಕಸಭೆಯಲ್ಲಿ ಮುಂಜಾನೆ ಪ್ರಶ್ನೋತ್ತರ ವೇಳೆ ಆರಂಭ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಪ್ರಕಣವನ್ನು ಎತ್ತಿದರು.ಪ್ರಶ್ನೋತ್ತರ ಅವಧಿಯ ನಂತರ ಅವಕಾಶ ನೀಡುವುದಾಗಿ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ಭರವಸೆ ನೀಡಿರೂ ಗದ್ದಲ ತಣ್ಣಗಾಗಲಿಲ್ಲ.
ಮುಂದೂಡಿಕೆಯ ನಂತರಸದನ ಪುನಃ ಸೇರಿದಾಗಕಾಂಗ್ರೆಸ್ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಮಾತಿನ ದಾಳಿಗೆ ಬಿಜೆಪಿ ಸಂಸದರು ಪ್ರತಿದಾಳಿ ನಡೆಸಿದರು.ಕರ್ನಾಟಕ ಸರ್ಕಾರ ಅತಂತ್ರವಾಗಲುಕಾಂಗ್ರೆಸ್-ಜೆಡಿಎಸ್ ನಡುವಣ ಒಳಜಗಳಕಾರಣವೇ ವಿನಾ ಬಿಜೆಪಿ ಅಲ್ಲ.ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟದಲ್ಲಿ ಗಾಯಗೊಂಡ ಶಾಸಕ ಆಸ್ಪತ್ರೆ ಸೇರಬೇಕಾಯಿತುಎಂದುಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.