ನವದೆಹಲಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿದರೆ ಮಾತ್ರ ಸ್ವೀಕರಿಸಲು ನಿರ್ಧರಿಸಿರುವುದಾಗಿ ಲೋಕಪಾಲ ಈಚೆಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
2020ರಲ್ಲಿ ಕೇಂದ್ರ ಸರ್ಕಾರವು ಲೋಕಪಾಲ ನಿಯಮಗಳಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿತ್ತು. ದೂರು ಸಲ್ಲಿಸುವ ನಿಗದಿತ ನಮೂನೆಯ ಬಗ್ಗೆಯೂ ಇದರಲ್ಲಿ ತಿಳಿಸಲಾಗಿದೆ.
ಈ ನಿಯಮಗಳ ಅನುಸಾರ ದೂರು ಸಲ್ಲಿಸುವಾಗ ಅನುಸರಿಸಬೇಕಾದ ಕಾರ್ಯವಿಧಾನಗಳ ಕುರಿತು ಕಳೆದ ವರ್ಷ ಜುಲೈನಲ್ಲಿ ಲೋಕಪಾಲ ಸುತ್ತೋಲೆ ಹೊರಡಿಸಿತ್ತು.
ನಿಗದಿತ ನಮೂನೆಯಲ್ಲಿ ಇಲ್ಲದ ದೂರುಗಳನ್ನು ಅಗತ್ಯ ಕ್ರಮಗಳಿಗಾಗಿ ಅಧ್ಯಕ್ಷರಿಗೆ ಕಳುಹಿಸಲಾಗುವುದು ಎಂದು ಫೆಬ್ರುವರಿ 10ರಂದು ಹೊರಡಿಸಿದ ಸುತ್ತೋಲೆಯಲ್ಲಿ ಲೋಕಪಾಲ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.