ನವದೆಹಲಿ: ಚುನಾವಣಾ ಅಕ್ರಮಗಳಲ್ಲಿ ಒಂದಾದ ಹಣ ಅಕ್ರಮ ಸಾಗಣೆಯನ್ನು ತಡೆಯುವಲ್ಲಿ ಚುನಾವಣಾ ಆಯೋಗವು ಸಾಕಷ್ಟು ಕ್ರಮ ವಹಿಸಿದ್ದು, 2017–18ನೇ ಸಾಲಿಗೆ ಹೋಲಿಸಿದಲ್ಲಿ, 2022–23ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಿಂದ ವಶಕ್ಕೆ ಪಡೆದ ಹಣವೇ ಅತ್ಯಧಿಕ.
ಚುನಾವಣಾ ಆಯೋಗವು ಒಟ್ಟು ವಶಕ್ಕೆ ಪಡೆದ ನಗದು ಪ್ರಮಾಣ ₹ 3,400 ಕೋಟಿ. ಇದು 2017ಕ್ಕೆ ಹೋಲಿಸಿದಲ್ಲಿ ಶೇ 835ರಷ್ಟು ಹೆಚ್ಚಳವಾಗಿದೆ.
ಇದರಲ್ಲಿ ರಾಜಸ್ಥಾನದಿಂದ ₹704 ಕೋಟಿ (ಶೇ 951), ತೆಲಂಗಾಣ ₹778 ಕೋಟಿ (ಶೇ 506ರಷ್ಟು), ನಾಗಾಲ್ಯಾಂಡ್ ₹ 50 ಕೋಟಿ (ಶೇ 1063), ಮಧ್ಯಪ್ರದೇಶ ₹332 ಕೋಟಿ (ಶೇ 898)ಯಷ್ಟಿದೆ.
ಗುಜರಾತ್‌ನಿಂದ ಗರಿಷ್ಠ ₹802 ಕೋಟಿ (ಶೇ 2847), ತ್ರಿಪುರಾ ₹45 ಕೋಟಿ (ಶೇ 2439), ಹಿಮಾಚಲ ಪ್ರದೇಶ ₹ 75ಕೋಟಿ (ಶೇ 534), ಚತ್ತೀಸಗಢ ₹78 ಕೋಟಿ (ಶೇ 1142), ಮೇಘಾಲಯ ₹74 ಕೋಟಿ (ಶೇ 6295), ಮೀಜೋರಾಂ ₹123 ಕೋಟಿ (ಶೇ 2695) ಹಾಗೂ ಕರ್ನಾಟಕ ₹384 ಕೋಟಿ (ಶೇ 358ರಷ್ಟು)ಯಷ್ಟು ಮೊತ್ತ ವಶಪಡಿಸಿಕೊಳ್ಳಲಾಗಿದೆ.
ಕಳೆದ 11 ವಿಧಾನಸಭಾ ಚುನಾವಣೆಗಳಲ್ಲಿ ವಶಕ್ಕೆ ಪಡೆಯುವ ಹಣದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.