ADVERTISEMENT

ಹರಿಯಾಣ: ಕೃಷಿ ಕಾಯ್ದೆ ವಿರೋಧಿಸಿ ಐಎನ್‌ಎಲ್‌ಡಿ ಶಾಸಕ ಅಭಯ್ ಸಿಂಗ್ ರಾಜೀನಾಮೆ

ಪಿಟಿಐ
Published 27 ಜನವರಿ 2021, 14:24 IST
Last Updated 27 ಜನವರಿ 2021, 14:24 IST
ಅಭಯ್ ಸಿಂಗ್ ಚೌಟಾಲ (ಪಿಟಿಐ ಚಿತ್ರ)
ಅಭಯ್ ಸಿಂಗ್ ಚೌಟಾಲ (ಪಿಟಿಐ ಚಿತ್ರ)   

ಚಂಡೀಗಡ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದ ‘ಭಾರತೀಯ ರಾಷ್ಟ್ರೀಯ ಲೋಕ್ ದಳ (ಐಎನ್‌ಎಲ್‌ಡಿ)’ದ ಏಕೈಕ ಶಾಸಕ ಅಭಯ್ ಸಿಂಗ್ ಚೌಟಾಲ ರಾಜೀನಾಮೆ ನೀಡಿದ್ದಾರೆ.

ಚೌಟಾಲ ಅವರ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ಹರಿಯಾಣ ವಿಧಾನಸಭೆ ಸ್ಪೀಕರ್ ಜ್ಞಾನ್‌ಚಂದ್ ಗುಪ್ತಾ ತಿಳಿಸಿದ್ದಾರೆ.

ರೈತರ ಬೇಡಿಕೆಗಳು ಈಡೇರದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಚೌಟಾಲ ಹೇಳಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಐಎನ್‌ಎಲ್‌ಡಿ ಪಕ್ಷದಿಂದ ಆಯ್ಕೆಯಾದ ಏಕೈಕ ಶಾಸಕ ಇವರಾಗಿದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.