ADVERTISEMENT

ವಂದೇ ಭಾರತ್‌: ಅತಿ ದೂರದ ಸಂಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 16:08 IST
Last Updated 30 ಅಕ್ಟೋಬರ್ 2024, 16:08 IST
Trial run
ಸಾಂದರ್ಭಿಕ ಚಿತ್ರ
Trial run ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ರೈಲ್ವೆಯು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ರೈಲಿನ ಅತಿ ದೂರದ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದೆ.

ದೀಪಾವಳಿ ಮತ್ತು ಛತ್‌ ಪೂಜೆಯ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ರೈಲ್ವೆ ಇಲಾಖೆಯು ದೆಹಲಿಯಿಂದ ಪಟ್ನಾಕ್ಕೆ ವಿಶೇಷ ರೈಲು ಸಂಚಾರವನ್ನು ಪ್ರಾರಂಭ ಮಾಡಿದೆ.

‘ಪ್ರಾಯೋಗಿಕವಾಗಿ ಸಂಚಾರ ಆರಂಭಿಸಿರುವ ಈ ರೈಲು 11.35 ಗಂಟೆಗಳಲ್ಲಿ 994 ಕಿ.ಮೀ ಸಂಚರಿಸಲಿದೆ. ಈ ರೈಲು ಪ್ರಮುಖ ಸ್ಥಳಗಳಾದ ಆರಾ, ಬಕ್ಸರ್‌, ದೀನ್‌ದಯಾಳ್‌ ಉಪಾಧ್ಯಾಯ ನಿಲ್ದಾಣ ಪ್ರಯಾಗ್‌ರಾಜ್‌ ಮತ್ತು ಕಾನ್ಪುರದಲ್ಲಿ ನಿಲುಗಡೆಯಾಗಲಿದೆ’ ಎಂದು ರೈಲ್ವೆ ಸಚಿವಾಲಯ ದೃಢಪಡಿಸಿದೆ.

ADVERTISEMENT

ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬುಧವಾರ, ಶುಕ್ರವಾರ ಮತ್ತು ಭಾನುವಾರ ದೆಹಲಿಯಿಂದ ಪಟ್ನಾಕ್ಕೆ ಸಂಚರಿಸಲಿದೆ. ಸೋಮವಾರ, ಗುರುವಾರ ಮತ್ತು ಶನಿವಾರ ಪಟ್ನಾದಿಂದ ದೆಹಲಿಗೆ ಸಂಚರಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.