ADVERTISEMENT

ಅಕ್ರಮ ಡಿಜಿಟಲ್ ಲೋನ್ ಆ್ಯಪ್ ನಡೆಸಿದ ಚೀನಾದ ಮೂವರ ಪತ್ತೆಗೆ ಲುಕ್‌ಔಟ್ ನೋಟಿಸ್

ಪಿಟಿಐ
Published 18 ಜುಲೈ 2022, 8:17 IST
Last Updated 18 ಜುಲೈ 2022, 8:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತದಲ್ಲಿ ಅಕ್ರಮವಾಗಿ ‘ಡಿಜಿಟಲ್ ಲೋನ್ ಆ್ಯಪ್’ ನಡೆಸುತ್ತಿರುವ ಆರೋಪದ ಮೇಲೆ ಮೂವರು ಚೀನಾ ಪ್ರಜೆಗಳ ವಿರುದ್ಧ ವಲಸೆ ವಿಭಾಗವು ಲುಕ್‌ಔಟ್ ನೋಟಿಸ್‌ ಹೊರಡಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಒಡಿಶಾದ ಆರ್ಥಿಕ ಅಪರಾಧಗಳ ವಿಭಾಗದ ಕೋರಿಕೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಇದೇ ಆರೋಪದ ಮೇಲೆ ಮತ್ತೊಬ್ಬ ಚೀನಾದ ಪ್ರಜೆಯ ವಿರುದ್ಧ ಲುಕ್‌ಔಟ್ ನೋಟಿಸ್‌ ಹೊರಡಿಸಲಾಗಿತ್ತು.

‘ಅಕ್ರಮ ಡಿಜಿಟಲ್‌ ಲೋನ್‌ ಅವ್ಯವಹಾರದಲ್ಲಿ ಅವರು ಮಾಸ್ಟರ್‌ಮೈಂಡ್‌ಗಳಾಗಿದ್ದಾರೆ. ಅವರು ಪ್ರಮುಖ ಆರೋಪಿಗಳು’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಆ್ಯಪ್‌ಗೆ ದೇಶದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಂದಿ ಬಲಿಪಶುಗಳಾಗಿದ್ದಾರೆ ಎಂದು ಅ ಸುತ್ತೋಲೆಯಲ್ಲಿ ಹೇಳಲಾಗಿದೆ.

ADVERTISEMENT

‘ಅವರು ಇಂಡೋನೇಷ್ಯಾ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಇದೇ ರೀತಿಯ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪುರಾವೆಗಳಿವೆ’ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.