ADVERTISEMENT

TTD ವೆಂಕಟೇಶ್ವರ ದೇಗುಲ: ಏಪ್ರಿಲ್‌ನಲ್ಲಿ 20 ಲಕ್ಷ ಭಕ್ತರು; ₹102 ಕೋಟಿ ಸಂಗ್ರಹ

ಪಿಟಿಐ
Published 4 ಮೇ 2024, 9:49 IST
Last Updated 4 ಮೇ 2024, 9:49 IST
ತಿರುಪತಿ ವೆಂಕಟೇಶ್ವರ ದೇಗುಲ
ತಿರುಪತಿ ವೆಂಕಟೇಶ್ವರ ದೇಗುಲ   

ತಿರುಪತಿ: ‘ಜಗತ್‌ಪ್ರಸಿದ್ಧ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಟ್ಟು ಕಾಣಿಕೆ ಮೊತ್ತ ₹102 ಕೋಟಿ ಸಂಗ್ರಹವಾಗಿದೆ’ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (TTD)ನ  ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮರೆಡ್ಡಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏಪ್ರಿಲ್ ತಿಂಗಳಿನಲ್ಲಿ ಒಟ್ಟು 20 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇವರಲ್ಲಿ 8 ಲಕ್ಷ ಭಕ್ತರು ತಮ್ಮ ಕೇಶವನ್ನು ಮುಡಿ ನೀಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ಒಂದು ತಿಂಗಳಲ್ಲಿ ಪ್ರಸಾದ ರೂಪದಲ್ಲಿ 94 ಲಕ್ಷ ಲಾಡು ಮಾರಾಟವಾಗಿದೆ. ಹಾಗೆಯೇ 40 ಲಕ್ಷ ಮಂದಿಗೆ ಅನ್ನಪ್ರಸಾದ ವಿತರಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಬರುವ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಟಿಟಿಡಿ ಯೋಜನೆಗಳನ್ನು ರೂಪಿಸುತ್ತಿದೆ. ಭಕ್ತರ ಸೇವೆ ಎಂದೂ ಮುಗಿಯದ ಕಾರ್ಯ. ದೇವಳದ ಸಿಬ್ಬಂದಿ ಭಕ್ತರ ಸೇವೆಯಲ್ಲಿ ಸದಾ ನಿರತವಾಗಿದೆ’ ಎಂದು ಧರ್ಮರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.