ADVERTISEMENT

ಪಾಸ್‌ಪೋರ್ಟ್‌ನಲ್ಲಿ ಕಮಲ ಚಿಹ್ನೆ: ಸರ್ಕಾರ ಸ್ಪಷ್ಟನೆ

ಪಿಟಿಐ
Published 13 ಡಿಸೆಂಬರ್ 2019, 1:33 IST
Last Updated 13 ಡಿಸೆಂಬರ್ 2019, 1:33 IST
   

ನವದೆಹಲಿ: ಹೊಸ ಪಾಸ್‌ಪೋರ್ಟ್‌ಗಳ ಮೇಲೆ ‘ಕಮಲ’ ಚಿಹ್ನೆಯನ್ನು ಮುದ್ರಿಸುತ್ತಿರುವ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

‘ಇದು ಪಾಸ್‌ಪೋರ್ಟ್‌ಗಳ ಭದ್ರತಾ ವೈಶಿಷ್ಟ್ಯದ ಭಾಗವಾಗಿದ್ದು,ನಕಲಿ ಪಾಸ್‌ಪೋರ್ಟ್‌ಗಳನ್ನು ಪತ್ತೆ ಹಚ್ಚಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಮಲ ರಾಷ್ಟ್ರೀಯ ಹೂವು. ಉಳಿದ ರಾಷ್ಟ್ರೀಯ ಚಿಹ್ನೆಗಳನ್ನು ಸರದಿಯಂತೆ ಬಳಕೆ ಮಾಡಲಾಗುವುದು’ ಎಂದು ಸರ್ಕಾರ ತಿಳಿಸಿದೆ.

ಕೇರಳದ ಕೋಯಿಕ್ಕೋಡ್‌ನಲ್ಲಿ ಇತ್ತೀಚೆಗೆ ವಿತರಿಸಿದ ಪಾಸ್‌ಪೋರ್ಟ್‌ಗಳಲ್ಲಿ ಕಮಲದ ಚಿಹ್ನೆ ಕಂಡುಬಂದಿರುವ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಎಂ.ಕೆ. ರಾಘವನ್, ಸರ್ಕಾರವು ಎಲ್ಲವನ್ನೂ ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.