ADVERTISEMENT

ಭಾರತದ ರಾಜಕಾರಣದಲ್ಲಿ ಪ್ರೀತಿ, ಗೌರವ, ನಮ್ರತೆ ಕಾಣೆಯಾಗಿದೆ: ರಾಹುಲ್ ಗಾಂಧಿ

ಪಿಟಿಐ
Published 9 ಸೆಪ್ಟೆಂಬರ್ 2024, 5:27 IST
Last Updated 9 ಸೆಪ್ಟೆಂಬರ್ 2024, 5:27 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

– ಪಿಟಿಐ ಚಿತ್ರ

ವಾಷಿಂಗ್ಟನ್: ಭಾರತದ ರಾಜಕಾರಣದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ ಎಂದು ಟೆಕ್ಸಾಸ್‌ನಲ್ಲಿ ಇಂಡೊ–ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, ಭಾರತದ ಬಗ್ಗೆ ಏಕ ಪರಿಕಲ್ಪನೆ ಹೊಂದಿದೆ ಎಂದು ಆರ್‌ಎಸ್‌ಎಸ್ ಬಗ್ಗೆಯೂ ಟೀಕಿಸಿದ್ದಾರೆ.

ADVERTISEMENT

‘ಆರ್‌ಎಸ್‌ಎಸ್‌ ಭಾರತದ ಬಗ್ಗೆ ಏಕ ಪರಿಕಲ್ಪನೆ ಹೊಂದಿದೆ. ನಾವು ಬಹುವಿಧದ ವಿಚಾರಗಳ ಬಗ್ಗೆ ನಂಬಿಕೆ ಇಟ್ಟಿದ್ದೇವೆ’ ಎಂದು ಹೇಳಿದ್ದಾರೆ.

‘ಬಹುತೇಕ ಅಮೆರಿಕದಂತೆಯೇ ಪ್ರತಿಯೊಬ್ಬರಿಗೂ ಸ್ಪರ್ಧೆಗೆ ಅವಕಾಶ ಸಿಗಬೇಕೆಂದು ನಾವು ನಂಬಿದ್ದೇವೆ. ಪ್ರತಿಯೊಬ್ಬರಿಗೂ ಕನಸು ಕಾಣಲು ಅವಕಾಶ ಕೊಡಬೇಕು. ಜಾತಿ, ಭಾಷೆ, ಧರ್ಮ, ಸಂಪ್ರದಾಯ ಮತ್ತು ಇತಿಹಾಸಗಳನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬುದರ ಬಗ್ಗೆ ನಾವು ನಂಬಿಕೆ ಇಟ್ಟಿದ್ದೇವೆ’ಎಂದಿದ್ದಾರೆ.

‘ಇದೊಂದು ಹೋರಾಟವಾಗಿದೆ. ಭಾರತದ ಪ್ರಧಾನಿ, ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದ್ದು, ಚುನಾವಣೆಯಲ್ಲಿ ಅದು ಬಹಿರಂಗವಾಗಿದೆ. ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳು, ಎಲ್ಲ ಧರ್ಮಗಳು, ಸಂಪ್ರದಾಯಗಳು, ಪ್ರತಿಯೊಂದು ಜಾತಿಯನ್ನೂ ಗೌರವಿಸಬೇಕು. ಇವೆಲ್ಲವೂ ಸಂವಿಧಾನದಲ್ಲಿದೆ’ಎಂದು ರಾಹುಲ್ ಹೇಳಿದ್ದಾರೆ.

ಭಾರತೀಯ ರಾಜಕಾರಣದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆಯ ಮೌಲ್ಯಗಳನ್ನು ರೂಢಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದಿದ್ಧಾರೆ.

‘ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಪಕ್ಷಗಳಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಮಾಯವಾಗಿದೆ ಎಂದು ನನಗನಿಸುತ್ತದೆ. ಎಲ್ಲ ಜನರನ್ನು ಪ್ರೀತಿಯಿಂದ ಕಾಣಬೇಕು. ಅಗತ್ಯಕ್ಕನುಸಾರವಾಗಿ ಒಂದು ಧರ್ಮ, ಒಂದು ಭಾಷೆ, ಒಂದು ಜಾತಿ, ಒಂದು ರಾಜ್ಯದ ಜನರನ್ನು ಪ್ರೀತಿಯಿಂದ ಕಾಣುವುದಲ್ಲ’ಎಂದಿದ್ಧಾರೆ.

‘ಕೇವಲ ಬಲಿಷ್ಠರನ್ನು ಆಧರಿಸುವುದಲ್ಲ. ದುರ್ಬಲರು ಸೇರಿದಂತೆ ಎಲ್ಲರನ್ನು ಗೌರವದಿಂದ ಕಾಣಬೇಕು’ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಬಹುಮತ ಪಡೆಯುವಲ್ಲಿ ವಿಫಲವಾದುದನ್ನು ಉಲ್ಲೇಖಿಸಿದ ರಾಹುಲ್, ಬಿಜೆಪಿ ನಮ್ಮ ಸಂಪ್ರದಾಯ, ಭಾಷೆ ಮತ್ತು ಇತರವುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಸಂವಿಧಾನದ ಮೇಲೆ ಯಾರು ದಾಳಿ ಮಾಡುತ್ತಿದ್ದರೋ ಅವರೇ ನಮ್ಮ ಧಾರ್ಮಿಕ ಸಂಪ್ರದಾಯಗಳ ಮೇಲೂ ದಾಳಿ ಮಾಡುತ್ತಿದ್ದಾರೆ ಎಂದು ಜನ ನಂಬಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

‘ಲೋಕಸಭೆ ಚುನಾವಣೆಯ ಫಲಿತಾಂಶ ಬಂದು ಕೆಲವೇ ನಿಮಿಷಗಳಲ್ಲಿ ಯಾರೊಬ್ಬರೂ ಬಿಜೆಪಿ ಮತ್ತು ಪ್ರಧಾನಿಗೆ ಭಯಪಡದೇ ಇರುವುದನ್ನು ನಾವು ನೋಡಿದ್ದೇವೆ. ಇವೆಲ್ಲ ನಮ್ಮ ದೊಡ್ಡ ಸಾಧನೆಗಳು. ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡ, ಸಂವಿಧಾನದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂಬುದನ್ನು ಅರಿತುಕೊಂಡ ಜನರ ಗೆಲುವಾಗಿದೆ. ನಮ್ಮ ಧರ್ಮಗಳ ಮೇಲಿನ ದಾಳಿ, ನಮ್ಮ ರಾಜ್ಯಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಜನ ತಿಳಿಸಿದ್ದಾರೆ’ಎಂದು ರಾಹುಲ್ ಹೆಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.