ADVERTISEMENT

ಉಜ್ವಲ | ಹಣ ವರ್ಗಾವಣೆ ಸ್ವರೂಪದಲ್ಲಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 20:57 IST
Last Updated 10 ಜೂನ್ 2020, 20:57 IST
   

ಬೆಂಗಳೂರು: ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ ಖರೀದಿಗಾಗಿ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಪ್ಯಾಕೇಜ್‌ ಅಡಿ ನೀಡಲಾಗುವ ಏಪ್ರಿಲ್‌ ಹಾಗೂ ಮೇ ತಿಂಗಳ ಮುಂಗಡಹಣವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಕೆಲವು ಗ್ರಾಹಕರ ಖಾತೆಯಲ್ಲಿ ಹಣವು ಬಳಕೆಯಾಗದೆ ಉಳಿದಿರುವುದರಿಂದ ಜೂನ್‌ ತಿಂಗಳ ಹಣದ ವರ್ಗಾವಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ (ಎಚ್‌ಪಿಸಿಎಲ್‌) ತಿಳಿಸಿದೆ.

ಈಗಾಗಲೇ ಲಭಿಸಿರುವ ಹಣವನ್ನು ಬಳಕೆ ಮಾಡದಿರುವ ಗ್ರಾಹಕರು, ಖಾತೆಯಲ್ಲಿ ಉಳಿದಿರುವ ಹಣದಿಂದ ಸಿಲಿಂಡರ್‌ ಖರೀದಿಸಬೇಕು. ಜೂನ್‌ ತಿಂಗಳಲ್ಲಿ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡುವುದಿಲ್ಲ.

ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಬಂದಿರುವ ಮುಂಗಡ ಹಣವನ್ನು ಬಳಸಿರುವ ಗ್ರಾಹಕರು ಜೂನ್‌ ತಿಂಗಳಲ್ಲಿ ಸ್ವಂತ ಹಣದಲ್ಲಿ ಸಿಲಿಂಡರ್‌ ಖರೀದಿಸಬೇಕು. ಕಂಪನಿಗಳು ಜುಲೈ ತಿಂಗಳ ಮೊದಲ ವಾರದಲ್ಲಿ ಆ ಹಣವನ್ನು ಗ್ರಾಹಕರಿಗೆ ಮರಳಿಸಲಿವೆ.

ADVERTISEMENT

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಬಿಡುಗಡೆಯಾಗಿರುವ ಹಣವನ್ನು ಬಳಸದಿರುವವರು ಆ ಹಣವನ್ನು 2021ರ ಮಾರ್ಚ್‌ 31ರೊಳಗೆ ಬಳಸಬಹುದು.

ಜೂನ್‌ ತಿಂಗಳಲ್ಲಿ ಮೊದಲ ಬಾರಿಗೆ ಎವಿ ವೆರಿಫಿಕೇಷನ್‌ ಮಾಡಿಸಿಕೊಂಡ ಗ್ರಾಹಕರಿಗೆ, ಜೂನ್‌ 25ರೊಳಗೆ ಅರ್ಹತೆ ಲಭಿಸಿದ ಕೂಡಲೇ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.