ADVERTISEMENT

ರಾಜ್ಯಗಳ ಅಧಿಕಾರಕ್ಕೆ ಕೇಂದ್ರ ಕತ್ತರಿ

‘ಗ್ರಾಹಕರ ರಕ್ಷಣಾ ಮಸೂದೆ–2018’ಕ್ಕೆ ಲೋಕಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:17 IST
Last Updated 20 ಡಿಸೆಂಬರ್ 2018, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಮತ್ತು ನ್ಯಾಯಾಂಗಕ್ಕೆ ಇದ್ದ ಅಧಿಕಾರವನ್ನು ಸಂಪೂರ್ಣ ಕಿತ್ತುಕೊಳ್ಳುವಗ್ರಾಹಕರ ರಕ್ಷಣಾ ಮಸೂದೆ–2018ಅನ್ನು ಲೋಕಸಭೆಗುರುವಾರ ಅಂಗೀಕರಿಸಿದೆ. ರಾಜ್ಯಸಭೆ ಇನ್ನಷ್ಟೇ ಒಪ್ಪಿಗೆ ನೀಡಬೇಕಿದೆ.

ಈ ಮಸೂದೆಯು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಆಯೋಗಗಳ ನೇಮಕಾತಿಯ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

ರಫೇಲ್ ಒಪ್ಪಂದದ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಕಾಂಗ್ರೆಸ್ ಸಂಸದರು ನಡೆಸುತ್ತಿದ್ದ ಮತ್ತು ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಸಂಸದರು ನಡೆಸುತ್ತಿದ್ದ ಪ್ರತಿಭಟನೆಯ ಮಧ್ಯೆಯೇ ಗ್ರಾಹಕರ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

ADVERTISEMENT

‘ಮಸೂದೆಯು ಅಧಿಕಾರಶಾಹಿಗೆ ವಿಪರೀತ ಎನಿಸುವಷ್ಟು ಅಧಿಕಾರ ನೀಡುತ್ತದೆ. ಅಲ್ಲದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ’ ಎಂದು ಬಿಜು ಜನತಾ ದಳದಸಂಸದ ತಥಾಗತ ಸತ್ಪತಿ ಆಕ್ಷೇಪವ್ಯಕ್ತಪಡಿಸಿದರು.

**

ಗ್ರಾಹಕರ ಹಕ್ಕುಗಳಿಗೆ ಮತ್ತಷ್ಟು ಬಲ

* ಎಲ್ಲಾ ಸ್ವರೂಪದ ಸರಕು ಮತ್ತು ಸೇವೆಗಳ ವ್ಯಾಪ್ತಿಗೆ ಟೆಲಿಮಾರ್ಕೆಟಿಂಗ್ ಮತ್ತು ಮನೆ ನಿರ್ಮಾಣ ಸೇವೆಗಳನ್ನೂ ತರಲಾಗಿದೆ

* ಉತ್ಪನ್ನ/ಸೇವೆಯಿಂದ ಆಗುವ ಹಾನಿ/ಪರಿಣಾಮಗಳಿಗೆ ತಯಾರಕ, ಸೇವಾದಾರ ಮತ್ತು ಮಾರಾಟಗಾರನನ್ನು ಹೊಣೆ ಮಾಡಲಾಗುತ್ತದೆ. 1986ರ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ

* ಗ್ರಾಹಕರ ವ್ಯಾಜ್ಯಗಳ ಪರಿಹಾರಕ್ಕೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆ

* ಗ್ರಾಹಕರ ಹಕ್ಕುಗಳ ಅನುಷ್ಠಾನ, ಪಾಲನೆಗೆ ಉತ್ತೇಜನ ಮತ್ತು ರಕ್ಷಣೆಗಾಗಿ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಧಿಕಾರ ರಚನೆ

₹ 25,000ದಿಂದ ₹ 1ಲಕ್ಷ

ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿ/ಕಂಪನಿಗೆ ವಿಧಿಸಬಹುದಾದ ದಂಡ. (1986ರ ಕಾಯ್ದೆಯಲ್ಲಿ ಇದು ₹ 2,000ದಿಂದ ₹ 10,000ದವರೆಗೆ ಮಾತ್ರ ದಂಡ ವಿಧಿಸಬಹುದಿತ್ತು)

**

ಕೇಂದ್ರಕ್ಕೇ ಪರಮಾಧಿಕಾರ

1986ರ ಕಾಯ್ದೆ ಮತ್ತು 2018ರ ಮಸೂದೆ ಪ್ರಕಾರಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ನೇಮಕಾತಿ ಅಧಿಕಾರ

**

ಇ–ಕಾಮರ್ಸ್‌ಗೆ ಮೂಗುದಾರ

1986ರ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತರಲಾಗಿತ್ತು. ಆದರೆ, ‘ಇ–ಕಾಮರ್ಸ್’ ಈ ಕಾಯ್ದೆಯ ವ್ಯಾಪ್ತಿಯಲ್ಲಿ ಇರಲಿಲ್ಲ. 2018ರ ಮಸೂದೆಯಲ್ಲಿ ಇ–ಕಾಮರ್ಸ್ ಅನ್ನು ಇದರ ವ್ಯಾಪ್ತಿಗೆ ತರಲಾಗಿದೆ. ನೇರ ಮಾರಾಟ ಮತ್ತು ಆನ್‌ಲೈನ್ ವ್ಯಾಪಾರದ ಸ್ವರೂಪವನ್ನು ಈ ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವಹಿವಾಟುಗಳಿಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರವೇ ರೂಪಿಸಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.