ADVERTISEMENT

ನಾಸಿಕ್: ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ

ಪಿಟಿಐ
Published 20 ಮೇ 2024, 10:54 IST
Last Updated 20 ಮೇ 2024, 10:54 IST
<div class="paragraphs"><p>ವಿದ್ಯುನ್ಮಾನ ಮತಯಂತ್ರ </p></div>

ವಿದ್ಯುನ್ಮಾನ ಮತಯಂತ್ರ

   

(ಸಾಂಕೇತಿಕ ಚಿತ್ರ)

ನಾಸಿಕ್‌ (ಮಾಹಾರಾಷ್ಟ್ರ): ಮತಚಲಾಯಿಸುವ ವೇಳೆ ಇವಿಎಂ ಯಂತ್ರಕ್ಕೆ ಮಾಲಾರ್ಪಣೆ ಮಾಡಿದ ನಾಸಿಕ್‌ನ ಪಕ್ಷೇತರ ಅಭ್ಯರ್ಥಿಯೂ ಆಗಿರುವ ಧಾರ್ಮಿಕ ನಾಯಕ ಶಾಂತಿಗಿರಿ ಮಹಾರಾಜ್ ಅವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಡಿ ದೂರು ದಾಖಲಿಸಲಾಗಿದೆ.

ADVERTISEMENT

ತ್ರಿಂಬಕೇಶ್ವರದಲ್ಲಿರುವ ಎಂವಿಪಿ ಕಾಲೇಜು ಮತಗಟ್ಟೆಗೆ 25–30 ಬೆಂಬಲಿಗರೊಂದಿಗೆ ಬಂದ ಮಹಾರಾಜ್ ಅವರು, ತನ್ನ ಕತ್ತಲ್ಲಿದ್ದ ಮಾಲೆಯೊಂದನ್ನು ತೆಗೆದು ಇವಿಎಂ ಯಂತ್ರಕ್ಕೆ ಹಾಕಿದ್ದಾರೆ. ಬಳಿಕ ಮತ ಚಲಾಯಿಸಿದ್ದಾರೆ ಎಂದು ಪೊಲೀಂಗ್‌ ಅಧಿಕಾರಿ ದೂರಿನಲ್ಲಿ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ತ್ರಿಂಬಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಮಸ್ರೂಲ್ ಹಾಗೂ ಅಂಬಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿಗಿರಿ ಮಹಾರಾಜ್‌ ಅವರಿಗೆ ಮತ ಹಾಕಿ ಎಂದು ಬ್ಯಾಡ್ಜ್ ಧರಿಸಿದ್ದ ಅವರ ಬೆಂಬಲಿಗರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.