ADVERTISEMENT

ಶತಮಾನದ ಹಿಂದೆ ಕೆನಡಾ ಸೇರಿದ್ದ ದೇವತೆ ವಿಗ್ರಹ ಕಾಶಿಯಲ್ಲಿ ಪುನರ್‌ ಪ್ರತಿಷ್ಠಾಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2021, 2:36 IST
Last Updated 11 ನವೆಂಬರ್ 2021, 2:36 IST
100 ವರ್ಷಗಳ ಹಿಂದೆ ವಾರಾಣಸಿಯಿಂದ ಕಳವಾಗಿದ್ದ ಮಾತೆ ಅನ್ನಪೂರ್ಣೆಯ ಪ್ರಾಚೀನ ವಿಗ್ರಹ
100 ವರ್ಷಗಳ ಹಿಂದೆ ವಾರಾಣಸಿಯಿಂದ ಕಳವಾಗಿದ್ದ ಮಾತೆ ಅನ್ನಪೂರ್ಣೆಯ ಪ್ರಾಚೀನ ವಿಗ್ರಹ   

ದೆಹಲಿ: ಸುಮಾರು 100 ವರ್ಷಗಳ ಹಿಂದೆ ವಾರಾಣಸಿಯಿಂದ ಕಳವಾಗಿದ್ದ ಮಾತೆ ಅನ್ನಪೂರ್ಣೆಯ ಪ್ರಾಚೀನ ವಿಗ್ರಹವನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ನವೆಂಬರ್ 15 ರಂದು ಪ್ರತಿಷ್ಠಾಪಿಸಲಾಗುತ್ತಿದೆ.

ವಿಗ್ರಹವನ್ನು ಇತ್ತೀಚೆಗೆ ಕೆನಡಾದ ಒಟ್ಟಾವದಿಂದ ಭಾರತಕ್ಕೆ ಮರಳಿ ತರಲಾಗಿತ್ತು. ಕೇಂದ್ರ ಸರ್ಕಾರವು ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ವಿಗ್ರಹವನ್ನು ಹಸ್ತಾಂತರಿಸಲಿದೆ.

ಮಾತೆ ಅನ್ನಪೂರ್ಣೆಯ ವಿಗ್ರಹವು 17 ಸೆಂ. ಮೀ ಉದ್ದ, 9 ಸೆಂ.ಮೀ ಅಗಲವಿದೆ.

ADVERTISEMENT

ಅನ್ನಪೂರ್ಣೆಯ ಈ ವಿಗ್ರಹವನ್ನು ನ.11ರಂದು ದೆಹಲಿಯಿಂದ ವಾರಾಣಸಿಗೆ ಕೊಂಡೊಯ್ಯಲಾಗುತ್ತಿದೆ. ಇದಕ್ಕಾಗಿ ನಾಲ್ಕು ದಿನಗಳ ಯಾತ್ರೆ ನಡೆಯಲಿದೆ. ನ. 15ರಂದು ವಿಗ್ರಹವು ವಾರಾಣಸಿಗೆ ತಲುಪಲಿದ್ದು, ಕಾಶಿ ವಿಶ್ವನಾಥನ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

1976 ರಿಂದ ಈ ವರೆಗೆ ಕೇಂದ್ರ ಸರ್ಕಾರವು 55 ಪ್ರಾಚೀನ ವಿಗ್ರಹಗಳನ್ನು ಮರಳಿ ತಾಯ್ನಾಡಿಗೆ ತಂದಿದೆ. ಇದರಲ್ಲಿ ಶೇ 75ರಷ್ಟು ಮೋದಿ ಅವರ ಅಧಿಕಾರವಧಿಯಲ್ಲಿ ಭಾರತಕ್ಕೆ ಬಂದಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.