ಭೋಪಾಲ್: ಮಧ್ಯಪ್ರದೇಶ ಸಚಿವ ಸಂಪುಟವನ್ನು ಸೋಮವಾರ ವಿಸ್ತರಿಸಲಾಗಿದ್ದು, ಬಿಜೆಪಿ ನಾಯಕ ರಾಮ್‌ನಿವಾಸ್ ರಾವತ್ ಅವರು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಂಪುಟ ಸೇರಿದ್ದಾರೆ.
ರಾಜಭವನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ರಾಮ್‌ನಿವಾಸ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಕೆಲವು ಸಚಿವರು ಹಾಜರಿದ್ದರು.
ಶಿವಪುರ ಜಿಲ್ಲೆಯ ವಿಜಯಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿರುವ ರಾಮ್‌ನಿವಾಸ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದಾಗ್ಯೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.
ಏಪ್ರಿಲ್ 30ರಂದು ನಡೆದ ಚುನಾವಣಾ ಸಮಾವೇಶದಲ್ಲಿ ಅವರು ಬಿಜೆಪಿ ಸೇರಿದ್ದರು.
ಇವರ ಸೇರ್ಪಡೆಯೊಂದಿಗೆ ಸಿಎಂ ರಾವತ್ ಅವರ ಸಚಿವ ಸಂಪುಟದ ಬಲ 29ಕ್ಕೇರಿದೆ. ಒಟ್ಟು 34 ಮಂದಿಯನ್ನು ಸಂಪುಟಕ್ಕೆ ಸೇರಿಸುವ ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.