ADVERTISEMENT

ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ನಿರ್ಣಾಯಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 3:34 IST
Last Updated 11 ಡಿಸೆಂಬರ್ 2018, 3:34 IST
ಮಧ್ಯ ಪ್ರದೇಶದಲ್ಲಿ ಮತ ಎಣಿಕೆ  (ಕೃಪೆ: ಟ್ವಿಟರ್)
ಮಧ್ಯ ಪ್ರದೇಶದಲ್ಲಿ ಮತ ಎಣಿಕೆ (ಕೃಪೆ: ಟ್ವಿಟರ್)   

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಇದರಲ್ಲಿ ಮಧ್ಯ ಪ್ರದೇಶದ ಫಲಿತಾಂಶ ನಿರ್ಣಾಯಕವಾಗಲಿದೆ.ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಎಂಟು ಮತದಾನೋತ್ತರ ಸಮೀಕ್ಷೆಗಳ ಪೈಕಿ 6 ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹೇಳಿವೆ.

ಅದೇ ವೇಳೆ ಮಧ್ಯಪ್ರದೇಶದಲ್ಲಿ ಎರಡೂ ಪಕ್ಷಗಳು ಸಮಬಲದಲ್ಲಿವೆ.ಕಾಂಗ್ರೆಸ್ ಸ್ಥಿತಿ ಇಲ್ಲಿ ಸುಧಾರಣೆ ಕಂಡು ಬಂದಿದ್ದರೂ ಇಲ್ಲಿ ಯಾರಿಗೂ ಬಹುಮತ ಸಿಗುವ ಸಾಧ್ಯತೆಗಳಿಲ್ಲ.ಹಾಗಾಗಿ ಇಲ್ಲಿ ಮೈತ್ರಿ ಸರ್ಕಾರ ರಚನೆಯಾದರೆ ಸಣ್ಣ ಪುಟ್ಟ ಪಕ್ಷಗಳ ನಿಲುವು ನಿರ್ಣಾಯಕವಾಗಲಿದೆ. ಬಿಎಸ್‍ಪಿ, ಸಮಾಜವಾದಿ ಪಕ್ಷ, ಗೋಂಡ್ವಾನ ಗಣ ತಂತ್ರ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಚುನಾವಣಾ ಕಣದಲ್ಲಿದೆ.

ತೆಲಂಗಾಣದಲ್ಲಿ ಟಿಆರ್‌ಎಸ್, ಮಿಜೊರಾಂನಲ್ಲಿಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಈ ಐದು ರಾಜ್ಯ ಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳ ಚುನಾವಣಾ ಫಲಿತಾಂಶ ಹೆಚ್ಚು ನಿರ್ಣಾಯಕವಾಗಲಿದೆ.ಕಾಂಗ್ರೆಸ್‍ಗೆ ಈ ವಿಧಾನಸಭಾ ಚುನಾವಣೆ ನಿರ್ಣಾಯಕ ಘಟ್ಟವಾಗಲಿದೆ.ಯಾಕೆಂದರೆ ಇಲ್ಲಿ ಈಗ ಕಾಂಗ್ರೆಸ್‍ಗೆ ಅನುಕೂಲವಾದ ಪರಿಸ್ಥಿತಿ ಇದೆ.ಎರಡು ರಾಜ್ಯಗಳಲ್ಲಾದರೂ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗದೇ ಇದ್ದರೆ ಅಂದು ರಾಹುಲ್ ಗಾಂಧಿ ನೇತೃತ್ವಕ್ಕೆ ಹೊಡೆತ ಆಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.