ADVERTISEMENT

MP Exit Poll Result: ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 13:23 IST
Last Updated 30 ನವೆಂಬರ್ 2023, 13:23 IST
<div class="paragraphs"><p>MP Exit Poll Result</p></div>

MP Exit Poll Result

   

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ‌ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

230 ಸದಸ್ಯ ಬಲದ ವಿಧಾನಸಭಾ ಚುನಾವಣೆಗೆ ನವೆಂಬರ್ 17ರಂದು ಚುನಾವಣೆ ನಡೆದಿದೆ. ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.

ADVERTISEMENT

ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಗೆಲುವಿಗೆ ತೀವ್ರ ಪೈಪೋಟಿ ನಡೆಯಲಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯನ್ನು ಪೋಲ್‌ಸ್ಟ್ರಾಟ್‌, ಮ್ಯಾಟ್ರಿಜ್‌, ರಿಪ್ಲಬಿಕ್‌ ಸಮೀಕ್ಷೆಗಳು ಬಹಿರಂಗಪಡಿಸಿವೆ.

ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಕನಿಷ್ಠ 116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.

ವಿವಿಧ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಪೋಲ್‌ಸ್ಟ್ರಾಟ್‌

ಬಿಜೆಪಿ : 106–116

ಕಾಂಗ್ರೆಸ್ : 111–121

ಇತರೆ : 00–06

ಮ್ಯಾಟ್ರಿಜ್‌ ಸಮೀಕ್ಷೆ

ಬಿಜೆಪಿ : 118-130

ಕಾಂಗ್ರೆಸ್ : 97-107

ಇತರೆ : 00-02

ರಿಪ್ಲಬಿಕ್‌ ಸಮೀಕ್ಷೆ

ಬಿಜೆಪಿ : 118-130

ಕಾಂಗ್ರೆಸ್ : 97-107

ಇತರೆ : 00-02

ಜನ್‌ ಕಿ ಬಾತ್‌ ಸಮೀಕ್ಷೆ

ಬಿಜೆಪಿ : 100-123

ಕಾಂಗ್ರೆಸ್ : 102-125

ಇತರೆ : 00–00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.